close
Choose your channels

ಎ ಸೆಕಂಡ್ ಹ್ಯಾಂಡ್ ಲವರ್ಗೆ ಪ್ರಣೀತಾ!

Tuesday, February 11, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಎ ಸೆಕಂಡ್ ಹ್ಯಾಂಡ್ ಲವರ್ ಚಿತ್ರಕ್ಕೆ ಮೊದಲ ಪ್ರೇಯಸಿ ಹಾಗೂ ಮೊದಲ ನಾಯಕಿ ಪ್ರಣೀತಾ ಆಯ್ಕೆ ಆಗಿದ್ದರೆ. ಸಧ್ಯಕ್ಕೆ ಇಂದಿನಿಂದ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

ಚಿತ್ರದುರ್ಗದ ಕಲ್ಲಿನ ಕೋಟೆ ಇಂದ ಅರಮನೆ ನಗರಕ್ಕೆ ‘ಎ ಸೆಕಂಡ್ ಹ್ಯಾಂಡ್ ಲವರ್’ ಅರ್ಥಾತ್ ಮೈಸೂರಿಗೆ ಆಗಮಿಸಲಿದೆ.ನಾಳೆಯಿಂದ (ಸೋಮವಾರ 10ನೇ ಫೆಬ್ರವರಿ) ನಾಯಕಿ ಪ್ರಣೀತಾ ಹಾಗೂ ನಾಯಕ ಅಜಯ್ ರಾವು ಅಭಿನಯದ ಆರು ದಿನಗಳ ಹಾಡುಹಾಗೂ ಮಾತಿನ ಭಾಗದ ಚಿತ್ರೀಕರಣ ಹಮ್ಮಿಕೊಂಡಿದೆ. ಮೊದಲನೇ ಹಂತದ ಚಿತ್ರೀಕರಣ ಪೂರೈಸಿದ ಮತ್ತಷ್ಟು ಬಿರುಸಿನ ಚಿತ್ರೀಕರಣ ಮಾಡಲು ಚಿತ್ರತಂಡ ಮೈಸೂರಿಗೆ ಆಗಮಿಸಲಿದೆ. ಇವರಗೆ ಬೆಂಗಳೂರಿನಲ್ಲಿ ಮೂರು ದಿವಸಗಳ ಚಿತ್ರೀಕರಣ ಮಾಡಲಾಗಿದೆ.

ಅಜಯ್ ರಾವ್ ಅವರಿಗೆ ಪ್ರಣೀತಾ ಹಾಗೂ ಅನಿಶ ಇಬ್ಬರು ನಾಯಕಿಯರು. ಕನ್ನಡದಲ್ಲಿ ಸಾಹಸ, ಪ್ರೀತಿ ಭಾವನಾತ್ಮಕ ಚಿತ್ರಗಳ ಜೊತೆಗೆ ಉತ್ತಮ ಸಂಗೀತದೊಂದಿಗೆ‘ ಸತ್ಯ ಇನ್ ಲವ್, ಗಿಲ್ಲಿ, ಲಕ್ಷ್ಮಿ’ ಚಿತ್ರಗಳ ಮೂಲಕ ಜನಪ್ರಿಯರಾದ ರಾಘವ್ ಲೋಕಿ ಅವರು ‘ಎ ಸೆಕಂಡ್ ಹ್ಯಾಂಡ್ ಲವರ್’ ಸಿನೆಮಾದ ಮೂಲಕ ಕೇವಲ ರಾಘವ್ ಮರಸುರ್ ಆಗಿದ್ದಾರೆ.

ರಾಘವ ಮರಸುರ್ ಸಿನೆಮಾಸ್ ‘ಎ ಸೆಕಂಡ್ ಹ್ಯಾಂಡ್ ಲವರ್’ ಚಿತ್ರದ ನಿರ್ಮಾಪಕರು ಮಂಜುನಾಥ್, ಗುರುಕಿರಣ್ ಅವರ ಸಂಗೀತ, ಕೆ ಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಆನಂದ ಪ್ರಿಯ ಅವರ ಸಂಭಾಷಣೆ, ಕವಿರಾಜ್ ಅವರ ಗೀತ ಸಾಹಿತ್ಯ, ಹರ್ಷಹಾಗೂ ಮುರಳಿ ಅವರ ನೃತ್ಯ ಈ ಚಿತ್ರಕ್ಕಿದೆ.

‘ಎ ಸೆಕಂಡ್ ಹ್ಯಾಂಡ್ ಲವರ್’ ಚಿತ್ರದ ಪೋಷಕ ಕಲಾವಿದರ ತಂಡದಲ್ಲಿ ಸಾಧು ಕೋಕಿಲ, ಐಶ್ವರ್ಯ, ವಿಶ್ವ, ಗಿರಿ, ರಾಮಕೃಷ್ಣ ಹಾಗೂ ಇತರರು ಇದ್ದಾರೆ.

Follow us on Google News and stay updated with the latest!   

Comments

Welcome to IndiaGlitz comments! Please keep conversations courteous and relevant to the topic. To ensure productive and respectful discussions, you may see comments from our Community Managers, marked with an "IndiaGlitz Staff" label. For more details, refer to our community guidelines.
settings
Login to post comment
Cancel
Comment