ಉಪ್ಪಿ ವಯಸ್ಸು 24
Send us your feedback to audioarticles@vaarta.com
ಮೊನ್ನೆ ಬ್ರಹ್ಮ ಚಿತ್ರದ ಟ್ರೈಲರ್ ಬಿಡುಗಡೆ ಪತ್ರಿಕಾಗೋಷ್ಟಿಯಲ್ಲಿ ಉಪೇಂದ್ರ ಅವರಿಗೆ ಸಣ್ಣದಾಗಿ ಸಿಟ್ಟು ಬಂದಿತ್ತು. ಅದಕ್ಕೆ ಕಾರಣ ನಟಿ ಪ್ರಣೀತಾ ಮೈಕ್ ಹಿಡಿದು ನಾನು ಉಪ್ಪಿ ಅವರ ಅಭಿಮಾನಿ ಅವರ ಎಲ್ಲ ಸಿನೆಮಗಳನ್ನು ಕಾಲೇಜ್ ದಿನಗಳಿಂದ ನೋಡಿದ್ದೇನೆ ಎಂದಾಗ ಉಪೇಂದ್ರ ನನಗೆ ವಯಸ್ಸಾಗಿಲ್ಲ ಕೇವಲ 24. ಇವರು ಬಿಟ್ರೆ ಸ್ಕೂಲ್ ಡೇಸ್ ಇಂದ ನಾನು ಅಭಿಮಾನಿ ಎಂದು ನಾನು ವಯಸ್ಸಾದ ನಟ ಎಂದೇ ಹೇಳಿಬಿಡುತ್ತಾರೆ ಎಂಬ ಕೌತುಕ ಉಪ್ಪಿ ಅವರ ಮನಸಿನಲ್ಲಿ ಮನೆ ಮಾಡಿತ್ತು. ಆನಂತರ ಪತ್ರಿಕಾ ಸ್ನೇಹಿತರ ಹತ್ತಿರ ಮಾತನಾಡುತ್ತಾ ನಾನಂತೂ ನಾಯಕಿಯರಿಗೆ ಆಂಟೀ ಅಂತಲೇ ಕರೆಯೋದಕ್ಕೆ ಶುರು ಮಾಡಿದ್ದೇನೆ ಎಂದು ಹೇಳಿಕೊಂಡರು.
ನಾಯಕರಿಗೆ ವಯಸ್ಸಾಗಲ್ಲ ಅಂದುಕೊಂಡರೆ ಹ್ಯಾಗೆ ಉಪೇಂದ್ರ ಅವರು ತಮಾಷೆಗೆ ಹೇಳಿರಬಹುದು ಆದರೆ ಇತ್ತೀಚಿಗೆ ಅವರು 45ನೇವರ್ಷದ ಹುಟ್ಟು ಹಬ್ಬ ಭರ್ಜರಿ ಆಗಿ ಆಚರಿಸಿಕೊಂಡಿದ್ದಾರೆ. ಐದು ಬಗೆಯ ಉಪ್ಪಿಟ್ಟು ಬಡಸಿ ನಾನು ಅನ್ನೋನು ಎಂದು ಕರೆಯೋಲೆಯನ್ನು ಮುದ್ರಿಸಿಕೊಟ್ಟಿದ್ದಾರೆ.
ಉಪ್ಪಿ ಬ್ರಹ್ಮ ಮುಗಿಸಿ ಸೂಪರ್ ರಂಗ ನಂತರ ಜನವರಿ 2014 ಅಂತ್ಯದಲ್ಲಿ ಮುಲಾಜಿಲ್ಲದೆ ಅವರ ಸ್ವಂತ ಬ್ಯಾನರ್ ಉಪ್ಪಿ-2 ಕೈಗೆಟ್ಟಿಕೊಳ್ಳಲಿದ್ದಾರೆ. ಅಷ್ಟು ಹೊತ್ತಿಗೆ ಶ್ರೀ ನಿವಾಸ ರಾಜು ಅವರ ಸಧ್ಯದ ಶೀರ್ಷಿಕೆ ಬಸವಣ್ಣ ಅಲ್ಲ ಬ್ರಾಹ್ಮಣ ಅಲ್ಲ ಚಿತ್ರವೂ ಚಿತ್ರೀಕರಣ ಮುಗಿಸಿರುವುದು. ಶ್ರೀ ನಿವಾಸ ರಾಜು ಅವರ ಚಿತ್ರಕ್ಕೆ ಓಂ 2 ಎಂದು ನಾಮಕರಣ ಸರಿ ಇಲ್ಲ. ಅದನ್ನು ಯಾರು ಟಚ್ ಮಾಡಲೇಬಾರದು ಎಂದು ಕಡ್ಡಿ ತುಂಡು ಮಾಡಿದ ಹಾಗೆ ಹೇಳುತ್ತಾರೆ ಉಪೇಂದ್ರ.
ಉಪ್ಪಿಗಂತೂ ಅವರ ಸಿನೆಮಾ ಸೂಪರ್ ಗೆ ಪ್ರಶಸ್ತಿ ಬಂದದ್ದು ಹೋಗಿದ್ದು ಮತ್ತು ಮರು ಪರುಶೀಲನೆ ಕಮಿಟಿ ಇಂದ ಸ್ಪೆಷಲ್ ಪ್ರಶಸ್ತಿ ಬಂದದ್ದು ಅಷ್ಟಾಗಿ ತಿಳಿದಿಲ್ಲವಂತೆ.
Follow us on Google News and stay updated with the latest!
-
Contact at support@indiaglitz.com
Comments