ಆರ್ಯನ್ 3 ಹಾಡು ಚಿತ್ರೀಕರಣ
Send us your feedback to audioarticles@vaarta.com
ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಸಧ್ಯಕ್ಕೆ ಭಜರಂಗಿ ಶಿವಣ್ಣ ಹಾಗೂ ಲೋಕ ಸಭಾ ಸದಸ್ಯೆ ಮೋಹಕ ನಟಿ ರಮ್ಯ ಅಭಿನಯದ ಪ್ರಥಮ ಚಿತ್ರ ಸಿಂಗಪುರದಲ್ಲಿ ಮೂರು ಹಾಡುಗಳ ಚಿತ್ರೀಕರಣವನ್ನು ಮುಗಿಸಿ, ಮಾತಿನ ಭಾಗದ ಹೊರಾಂಗಣ ಚಿತ್ರೀಕರಣವನ್ನು ನಡೆಸುತ್ತಿದೆ.
ಆರ್ಯನ್ ಬಹು ನಿರೀಕ್ಷಿತ ಚಿತ್ರ. ಅದಕ್ಕೆ ಕಾರಣ ಶಿವರಾಜಕುಮಾರ್ ಹಾಗೂ ರಮ್ಯ. ಖ್ಯಾತ ನಿರ್ದೇಶಕ ಡಿ ರಾಜೇಂದ್ರ ಬಾಬು ಅವರ ಅಕಾಲ ಮರಣದಿಂದ ಇಡೀ ಚಿತ್ರ ತಂಡಕ್ಕೆ ಶಾಕ್ ಒದಗಿತ್ತು. ಈಗ ಸ್ವಲ್ಪ ಸುಡರಿಸಿಕೊಂಡು ಡಿ ರಾಜೇಂದ್ರ ಬಾಬು ಅವರು ಉಳಿಸಿದ್ದ ಭಾಗದ ಚಿತ್ರೀಕರಣವನ್ನು ನಿಗರ್ವಿ, ಸ್ನೇಹಮಯಿ ಚಿ ಗುರುದತ್ ಅವರು ನಡೆಸಿಕೊಡುತ್ತಿದ್ದಾರೆ.
ಡಿ ಕೇಶವ ಫಿಲ್ಮ್ಸ್ಲಾಂಛನದಲ್ಲಿ ಡಿ.ಕಮರ್ ಅವರು ನಿರ್ಮಿಸುತ್ತಿರುವ ಅರ್ಯನ್ ಚಿತ್ರಕ್ಕೆ ಶಿವರಾಜಕುಮಾರ್ ಹಾಗೂ ರಮ್ಯ ಅಭಿನಯಿಸಿದ ಹಾಡುಗಳಿಗೆ ದುಬೈನ ಆದಿಲ್ಶೇಖ್ ಅವರನ್ನು ಕರೆತಂದು ನೃತ್ಯ ನಿರ್ದೇಶನ ಮಾಡಿಸಿದ್ದಾರೆ. ಶಿವರಾಜಕುಮಾರ್ ಅವರ ಅಭಿನಯದಲ್ಲಿ ಗಣೇಶ್ ಅವರು ಸಾಹಸ ನಿರ್ದೇಶನ ಮಾಡಿದ ಸಾಹಸ ಸನ್ನಿವೇಶವೊಂದರ ಚಿತ್ರೀಕರಣ ಸಹ ಅಲ್ಲಿ ನಡೆದಿದೆ. ಮಾಸಾಂತ್ಯಕ್ಕೆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಲಿದೆ.
ಶರತ್ಬಾಬು, ಬುಲೆಟ್ಪ್ರಕಾಶ್, ವಿನಯಾಪ್ರಸಾದ್, ಅರ್ಚನಾಗುಪ್ತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಚಂದ್ರಶೇಖರ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಜನಾರ್ದನ್ ಮಹರ್ಷಿ ಸಂಭಾಷಣೆ ಬರೆದಿದ್ದಾರೆ. ಜೆಸ್ಸಿಗಿಫ಼್ಟ್ ಸಂಗೀತ ನಿರ್ದೇಶನದ ಅರ್ಯನ್ ಚಿತ್ರದ ಹಾಡುಗಳನ್ನು ಜಯಂತಕಾಯ್ಕಿಣಿ, ಕವಿರಾಜ್, ಯೋಗರಾಜಭಟ್, ನಾಗೇಂದ್ರಪ್ರಸಾದ್ ಬರೆದಿದ್ದಾರೆ.
Follow us on Google News and stay updated with the latest!
-
Contact at support@indiaglitz.com
Comments