ಅದ್ದೂರಿ ಪವರ್ * * * ಆಡಿಯೋ ಬಿಡುಗಡೆ
Send us your feedback to audioarticles@vaarta.com
ಅದು ಇಬ್ಬರು ಬಾಕ್ಸ್ ಆಫೀಸ್ ನಾಯಕರ ಸಂಗಮ. ಒಬ್ಬರು ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇನ್ನೊಬ್ಬರು ನೆನೋಕ್ಕಡೆ ಎನ್ನುವ ಮಹೇಶ್ ಬಾಬು ತೆಲುಗು ಚಿತ್ರರಂಗದ ರಾಜಕುಮಾರ. ಅದು ಪವರ್ *** ಧ್ವನಿ ಸುರಳಿ ಬಿಡುಗಡೆ ಕರ್ನಾಟಕದ ಗಡಿ ಪ್ರದೇಶ ಬಳ್ಳಾರಿ ಜಿಲ್ಲೆ ಅಲ್ಲಿ. ಪುನೀತ್ ಹಾಗೂ ಮಹೇಶ್ ಬಾಬು ಅವರು ತಮ್ಮ ಒಡನಾಟವನ್ನು ಸ್ಮರಿಸಿ ಕೊಂಡರು.
ವರ್ಣರಂಜಿತ ಸಮಾರಂಭದ ನಡುವೆ ಚಿತ್ರದ ಸೀಡಿ ಬಿಡುಗಡೆ ಮಾಡಿ ಮಾತನಾಡಿದ ಮಹೇಶ್ ಬಾಬು ಅವರು ಪೋಕಿರಿ ಚಿತ್ರದ ಸಂದರ್ಭದಲ್ಲಿ ವರನಟ ಡಾ:ರಾಜಕುಮಾರ್ ಅವರ ಮನೆಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು ಹಾಗೂ ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಪ್ರತಿಭಾವಂತ ನಟ ಹಾಗೂ ನನ್ನ ಆತ್ಮೀಯ ಸ್ನೇಹಿತರೂ ಕೂಡ. ನಾನು ಅಭಿನಯಸಿದ ದೂಕುಡು ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಈ ಸಿನಿಮಾ ಕೂಡ ದೊಡ್ಡ ಹೆಸರು ಮಾಡಲಿ ಎಂದು ಶುಭ ಕೋರಿದರು.
ಗೆಳೆಯನ ಮಾತಿನಿಂದ ಸಂತಸಗೊಂಡ ಪುನೀತ್ ಅವರು ತೆಲುಗು ಚಿತ್ರರಂಗದ ಖ್ಯಾತ ನಟ ಮಹೇಶ್ ಬಾಬು ನನ್ನ ಸ್ನೇಹಿತರು. ಅವರು ಇಲ್ಲಿಗೆ ಬಂದು ನನ್ನ ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದು ತುಂಬಾ ಖುಷಿಯಾಗಿದೆ. ಅಲ್ಲದೆ ಬಳ್ಳಾರಿ ನಗರ ನನಗೆ ಇಷ್ಟವಾದ ಊರು. ನನ್ನ ಹಲವಾರು ಚಿತ್ರಗಳ ಚಿತ್ರೀಕರಣ ಇಲ್ಲಿನ ಸುತ್ತಮುತ್ತಲ್ಲ ಪ್ರದೇಶಗಳಲ್ಲಿ ನಡೆದಿದೆ. ಮಾದೇಶ್ ಅವರು ಈ ಸಿನಿಮಾವನ್ನು ಅದ್ಭುತವಾಗಿ ನಿರ್ದೇಶಿಸಿದ್ದಾರೆ. ನಿರ್ಮಾಪಕರು ಅದ್ದೂರಿಯಾಗಿ ಚಿತ್ರ ನಿರ್ಮಾಣ ಮಾಡಿದ್ದಾರೆ ಎಂದು ಚಿತ್ರತಂಡದವರ ಸಹಕಾರವನ್ನು ನೆನಪಿಸಿಕೊಂಡರು.
ಪ್ರಿನ್ಸ್ ಮಹೇಶ್ ಬಾಬು ಈ ಚಿತ್ರದ ಆಡಿಯೋ ಸೀಡಿಯನ್ನು ಬಿಡುಗಡೆ ಮಾಡಿ ಚಿತ್ರದ ಪ್ರಥಮ ಸೀಡಿಯನ್ನು ದೂಕುಡು ಚಿತ್ರದ ನಿರ್ದೇಶಕ ಶ್ರೀನುವೈಟ್ಲಾ ನೀಡಿದರು. ಕನ್ನಡ ಹಾಗೂ ತೆಲುಗು ಚಿತ್ರರಂಗದ ಇಬ್ಬರೂ ಸೂಪರ್ ಸ್ಟಾರ್ ಗಳಾದ ಪವರ್ ಸ್ಟಾರ್ ಪುನೀತ್ ರ<
Follow us on Google News and stay updated with the latest!
-
Contact at support@indiaglitz.com
Comments