ಕಿಶೋರ್ ದ್ವಿಭಾಷಾ ಚಿತ್ರ
Send us your feedback to audioarticles@vaarta.com
ಶ್ರೀಚರಂತ್ ಫಿಲಂಸ್ ಲಾಂಛನದಲ್ಲಿ ಡಿ.ಸಿ.ಪ್ರಸನ್ನಕುಮಾರ್ ದೊಡ್ಡಬೇಲೆ ಅವರು ನಿರ್ಮಿಸುತ್ತಿರುವ ನೂತನ ಚಿತ್ರವೊಂದು ಜುಲೈನಲ್ಲಿ ಆರಂಭವಾಗಲಿದೆ. ಮುಖ್ಯಭೂಮಿಕೆಯಲ್ಲಿ ಕಿಶೋರ್ ಅಭಿನಯಿಸುತ್ತಿದ್ದಾರೆ. ಕ್ಷಣಕ್ಷಣಕ್ಕೂ ಕುತೂಹಲಕಾರಿಯಾಗಿರುವ ಈ ಚಿತ್ರದ ಚಿತ್ರೀಕರಣ ಕನ್ನಡ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ನಡೆಯಲಿದೆ. ಬೆಂಗಳೂರು ಹಾಗೂ ಕೇರಳದ ಮುನ್ನಾರ್ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.
ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ನಾರಿಯ ಸೀರೆ ಕದ್ದ ಚಿತ್ರವನ್ನು ನಿರ್ದೇಶಿಸಿದ್ದ ಪಿ.ಅಣ್ಣಯ್ಯ ಈ ಚಿತ್ರದ ನಿರ್ದೇಶಕರು. ಇದು ಅವರು ನಿರ್ದೇಶಿಸುತ್ತಿರುವ ಆರನೇ ಚಿತ್ರ. ಸಿಂಪಲ್ಲಾಗಿ ಒಂದು ಲವ್ ಸ್ಟೋರಿ, ಬಹುಪರಾಕ್ ಚಿತ್ರಗಳ ಛಾಯಾಗ್ರಾಹಕರಾಗಿರುವ ಮನೋಹರ್ ಜೋಷಿ ಈ ಚಿತ್ರದ ಛಾಯಾಗ್ರಾಹಕರು. ನಿರ್ದೇಶಕರೇ ಕಥೆ ಬರೆದಿರುವ ಈ ಚಿತ್ರಕ್ಕೆ ಉಗ್ರಂ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದ ರಾಮಲಕ್ಷ್ಮಣ ಸಹೋದರರಲ್ಲಿ ಒಬ್ಬರಾದ ಶ್ರೀಲಕ್ಷ್ಮಣ ಅವರು ರಾಜೇಂದ್ರಕುಮಾರ್ ಆರ್ಯ ಅವರೊಟ್ಟಿಗೆ ಚಿತ್ರಕಥೆ ರಚಿಸುತ್ತಿದ್ದಾರೆ. ಸಂಭಾಷಣೆಯನ್ನೂ ಶ್ರೀಲಕ್ಷ್ಮಣ್ ಅವರೇ ಬರೆಯುತ್ತಿದ್ದಾರೆ. ಸುರೇಶ್ ಅರಸ್ ಅವರ ಸಂಕಲನವಿರುವ ಈ ಚಿತ್ರಕ್ಕೆ ಉಳಿದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಆಯ್ಕೆ ನಡೆಯುತ್ತಿದೆ.
ಚಿತ್ರದಲ್ಲಿ ಉಗ್ರಸ್ವರೂಪ ತಾಳುವ ನಾಯಿಯ ಪಾತ್ರ ಕೂಡ ಮುಖ್ಯಾವಾಗಿದ್ದು ನಾಯಿಯ ಶೋಧ ನಡೆಯುತ್ತಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
Follow us on Google News and stay updated with the latest!
Comments
- logoutLogout
-
Contact at support@indiaglitz.com