ಚಾರ್ಲಿ ಮಾತಿನ ಮನೆಗೆ
Send us your feedback to audioarticles@vaarta.com
ಚಾರ್ಲಿ ಕನ್ನಡ ಸಿನೆಮಾ 45 ದಿವಸಗಳ ಚಿತ್ರೀಕರಣ ಬೆಂಗಳೂರು, ಮೈಸೂರು, ಹಂಪಿಯಲ್ಲಿ ಮುಗಿಸಿ ಇದೀಗ ಮಾತಿನ ಮನೆಗೆ ಆಕಾಶ್ ಸ್ಟೂಡಿಯೋಗೆ ಬಂದು ತಲುಪಿದೆ. 15 ದಿವಸಗಳ ಮಾತುಗಳ ಜೋಡಣೆ ನಂತರ ಚಿತ್ರ ತಂಡ ಎರಡು ಹಾಡು ಹಾಗೂ ಒಂದು ಕ್ಲೈಮಕ್ಸ್ ಸಾಹಸ ದೃಶ್ಯವನ್ನು ಚಿತ್ರೀಕರಿಸಬೇಕಿದೆ ಎಂದು ನಿರ್ದೇಶನಕ್ಕೆ ಕಾಲಿಟ್ಟಿರುವ ಶಿವ ಅವರು ತಿಳಿಸಿದ್ದಾರೆ.
ಚಿತ್ರದ ಕಥೆ, ಹಾಡು ಹಾಗೂ ಸಾಹಸ ಸನ್ನಿವೇಶಗಳ ಬಗ್ಗೆ ಹೆಚ್ಚು ಒತ್ತು ನೀಡಲಾಗಿರುವ ಚಾರ್ಲಿ ಸಿನೆಮಾ ಮುಖ್ಯ ತಾರಾಗಣದಲ್ಲಿ ಕೃಷ್ಣ, ಮಿಲನ ಪ್ರಕಾಷ್ ಹಾಗೂ ವೈಶಾಲಿ ದೀಪಕ್ ಇದ್ದಾರೆ. ಜಯಮ್ಮನ ಮಗ ಚಿತ್ರದ ಖಳ ನಟ ಉದಯ್ ಹಾಗೂ ಮಂಜು ಈ ಚಿತ್ರದಲ್ಲಿ ಖಳ ನಟರು.
ಯೋಗರಾಜ್ ಭಟ್ ಹಾಗೂ ಸೂರಿ ಗರಡಿಯ ಶಿಷ್ಯ ಶಿವ ಜೀವನದಲ್ಲಿ ಪ್ರತಿಯೊಂದು ನಿಮಿಷವನ್ನು, ಪ್ರತಿಯೊಂದು ವಿಚಾ ರವನ್ನು ಸಂತೋಷದಿಂದ ಅನುಭವಿಸಬೇಕು ಎಂದು ಸಿನೆಮಾದಲ್ಲಿ ಹೇಳಿದ್ದಾರೆ.
ಚಿನ್ನ ಬೆಳ್ಳಿ ವ್ಯಾಪಾರದ ಚೆನ್ನಾರಾಯಪಟ್ಟಣದ ಮಂಜುನಾಥ್ ಅವರು ಈ ಚಿತ್ರದ ನಿರ್ಮಾಪಕರು. ಶರತ್ ಲೋಹಿತಾಶ್ವ, ಎಂ ಎಸ್ ಉಮೇಶ್, ಭಾಸ್ಕರ್ ಪೋಷಕಕಲಾವಿದರು, ಗಿರೀಷ್ ಛಾಯಾಗ್ರಹಣ ಹಾಗೂ ವೀರ ಸಮರ್ಥ ಅವರ ಸಂಗೀತ ಒದಗಿಸಿದ್ದಾರೆ.
Follow us on Google News and stay updated with the latest!
Comments
- logoutLogout