ಅಂಬಿ ನೆನೆದ ಅಣ್ಣಾವ್ರು
Send us your feedback to audioarticles@vaarta.com
ಇಂದು ಡಾಕ್ಟರ್ ರಾಜಕುಮಾರ್ ಹುಟ್ಟಿದ ಹಬ್ಬ ಜೊತೆಗೆ ನನ್ನ ಮರು ಹುಟ್ಟು ಹಬ್ಬ. ಇದನ್ನು ಹೇಳಿದವರು ಡಾಕ್ಟರ್ ಅಂಬರೀಶ್. ಸಂದರ್ಭ ಡಾಕ್ಟರ್ ರಾಜಕುಮಾರ್ ಹುಟ್ಟು ಹಬ್ಬ ಆಚರಣೆ ಫಿಲ್ಮ್ ಚೇಂಬರ್ ಕಚೇರಿ ಆವರಣದಲ್ಲಿ. ಅಂಬರೀಶ್ ತಾವು ಸಹ ಸಾವು ಬದುಕಿನ ನಡುವೆ 52 ದಿವಸಗಳ ಕಾಲ ಹೊರಡಿದ್ದನ್ನು ಮನಸಿನಲ್ಲಿ ಇಟ್ಟುಕೊಂಡು ಹೇಳಿದರು.
ಡಾಕ್ಟರ್ ರಾಜಕುಮಾರ್ ಪುತ್ತಳಿಗೆ ಪುಷ್ಪ ಮಾಲೆ ಸಲ್ಲಿಸಿ ಬಂದ ಡಾಕ್ಟರ್ ಅಂಬರೀಶ್ ನನಗೂ ಮರುಜನ್ಮ ಸಿಕ್ಕಿದೆ. ಅಭಿಮಾನಗಳ ಪ್ರೀತಿ ನನ್ನ ಕಣ್ಣಾರೆ ಸತ್ತ ಮೇಲೆ ಸಿಗುವುದನ್ನು ಬದುಕಿದ್ದಾಗಲೇ ನೋಡಿ ಮೂಕ ವಿಸ್ಮಿತನಾಗಿದ್ದೇನೆ ಎಂದ ಅಂಬರೀಶ್ ಅವರು ಡಾಕ್ಟರ್ ರಾಜಕುಮಾರ್ ಜನುಮನದಿನ ಅಂದು ಅವರ ಗೆಳೆತನವನ್ನು ನೆನೆದರು.
ಒಮ್ಮೆ ಡಾಕ್ಟರ್ ರಾಜಕುಮಾರ್ ಅವರು ರೀ ಅಂಬರೀಶ್ ಅವರೇ ನಾನು ಅನೇಕ ವ್ಯಕ್ತಿಗಳ ಮೇಲೆ ಏನೇನೋ ವಿಚಾರಗಳನ್ನು ಕೇಳುತ್ತೇನೆ ಆದರೆ ನಿಮ್ಮ ಬಗ್ಗೆ ಒಬ್ಬರು ಬೊಟ್ಟು ಮಾಡಿ ತೋರಿಸೋಲ್ಲ ಅಂದಾಗ ಅಂಬರೀಶ್ ಅವರು ಒಂದು ದೊಡ್ಡ ಪ್ರಶಸ್ತಿ ಸಿಕ್ಕ ಹಾಗೆ ಆಯಿತು ಎಂದು ಭಾವಿಸಿದರು. ಅದನ್ನೇ ಅವರು ಮೊನ್ನೆ ಹೇಳಿಕೊಂಡರು. ಅಂಬರೀಶ್ ಅವರು ಅನೇಕ ಬಾರಿ ಹೇಳಿದ ಮಾತು ಅವರ ತಾಯಿ ಡಾಕ್ಟರ್ ರಾಜಕುಮಾರ್ ಕಾಲು ಮುಟ್ಟಿ ನಮಸ್ಕಾರ ಮಾಡಿ ಬಾ ಅಂದರೆ ಇವರು ಅವರ ಜೊತೆ ಹರಟಿದ್ದು ಕೊನೆಗೆ ಬೆಂಗಳೂರಿಂದ ಮೈಸೂರು ತನಕ ಅಮ್ಮ ಬೈದಿದ್ದು ನೆನೆದರು. ಅಮ್ಮನಿಗೆ ನಾನು ಅಂತ ದೊಡ್ಡ ವ್ಯಕ್ತಿಗೆ ನಮಸ್ಕರಿಸಲಿಲ್ಲ ಅಂತ ಬೇಜಾರು ಆದರೆ ಅಣ್ಣಾ ಅವರಿಗೆ ನಾನು ಆ ಮೊದಲೇ ಪರಿಚಯ ಸ್ನೇಹ ಎರಡು ಇತ್ತು.
ಅಂಬರೀಶ್ ಅವರು ಅಣ್ಣಾ ಅವರ ಜೊತೆ ಒಡಹುಟ್ಟಿದವರು ಚಿತ್ರದಲ್ಲಿ ಅಭಿನಯಿಸಿದ್ದನ್ನು ಸ್ಮರಿಸಿದರು. ಜೊತೆಗೆ ಅಣ್ಣಾ ಅವರನ್ನು ದೇಶದ ಎಲ್ಲೆಡೆ ಹೋದಾಗಲೆಲ್ಲ ವಿಚಾರಿಸಿಕೊಳ್ಳುವುದಿದೆಯಲ್ಲ ಜನ ಇದ್ದರೆಲ್ಲ ಅದೇ ಅವರು ಪಡೆದಿರುವ ಜನಪ್ರಿಯತೆಗೆ ಒಂದು ಸಾಕ್ಷಿ ಎಂದರು ಡಾಕ್ಟರ್ ಅಂಬರೀಶ್.
Follow us on Google News and stay updated with the latest!
Comments
- logoutLogout
-
Contact at support@indiaglitz.com