ಮಾಮು ಟಿ ಅಂಗಡಿ ಮಾತು ಮುಗೀತು
Send us your feedback to audioarticles@vaarta.com
ಮೊನ್ನೆ ತಾನೇ ನಾಯಕ ಅಜೇಯ ಅಭಿನಯ ಈ ಸಿನೆಮಕ್ಕಾಗಿ ಮಾಡಿದ ಸುದ್ದಿ ಓದಿದ್ರಿ. ಈಗ ಮಾಮು ಟೀ ಅಂಗಡಿ ಮಾತುಗಳ ಸಂಪೂರ್ಣ ಚಿತ್ರೀಕರಣ ಮುಗಿಸಿಕೊಂಡು ಹಾಡಿನ ಚಿತ್ರಿಕರಣದಲ್ಲಿ ತೊಡಗಿಸಿಕೊಂಡಿದೆ. ನಗರದ ಹೊರ ವಲಯ ಕೆ ಆರ್ ಪುರಂ ಬಳಿ ಒಂದು ಹಾಡಿನ ಚಿತ್ರೀಕರಣ ಶುರುವಾಗಿದೆ. ಎರಡು ಹಾಡುಗಳ ಚಿತ್ರಕರಣ ಈಗಾಗಲೇ ಮುಗಿದಿದೆ.
ಹಲವು ವಿಶೇಷ ವ್ಯಕ್ತಿಗಳ ಜೊತೆಗೆ ಮೊದಲ ನಿರ್ದೇಶನದಲ್ಲಿ ಪರಮೇಶ್ವರ್ ಅವರು ಸದ್ದಿಲ್ಲದೇ ಚಿತ್ರೀಕರಣವನ್ನುಮಾಡುತ್ತಾ ಬಂದಿದ್ದಾರೆ. ಮೊದಲ ಹಂತದಲ್ಲಿ ಅವರು ಬೆಂಗಳೂರಿನ ಸುತ್ತ ಮುತ್ತ ಚಿತ್ರೀಕರಣ ಮಾಡಿದ್ದಾರೆ. ಕನ್ನಡ ಸಿನೆಮಾದ ಜನಪ್ರಿಯ ನಾಯಕರುಗಳಾದ ಶ್ರೀನಗರ ಕಿಟ್ಟಿ, ಅಜಯ್ ರಾವು, ನೆನಪಿರಲಿ ಪ್ರೇಮ್ ಹಾಗೂ ಯೋಗೀಶ್ ಅವರು ಒಂದು ಹಾಡಿಗೆ ಧ್ವನಿಗೂಡಿಸಲಿದ್ದಾರೆ. ಮಾಮು ಟೀ ಅಂಗಡಿ ಚಿತ್ರದಲ್ಲಿ ಅತಿಥಿ ನಟರಾಗಿ ಕೆಲವರು ಕಾಣಿಸಿಕೊಳ್ಳಲ್ಲಿದ್ದಾರೆ. ಡಾನ್ಸ್ ಇಂಡಿಯ ಡಾನ್ಸ್, ಕಲರ್ಸ್ ಟಿ ವಿ ಅಲ್ಲಿ ಬರುತ್ತಿರುವ ಜಲಕ್ ದಿಕ್ ಲಾಜ ಮತ್ತು ಚೈನಾ ದೇಶದ ಡಾನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ವರುಣ್ ಸಿಂಗಮ್ ಈ ಚಿತ್ರದಲ್ಲಿ ನಾಯಕರಾಗಿ ಕಾಣಿಸಕೊಳ್ಳಲಿದ್ದಾರೆ. ಡಾನ್ಸ್ ಇಂಡಿಯ ಡಾನ್ಸ್ ಕಾಯಕ್ರಮದ ಟೆರೆನ್ಸ್ ಲೂಯಿಸ್ ಮಾಮು ಟೀ ಅಂಗಡಿ ಚಿತ್ರದಲ್ಲಿ ಶಿಷ್ಯ ವರುಣ್ ಮೇಲಿನ ಮಮಕಾರಕ್ಕಾಗಿ ಒಂದು ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಶ್ರೀ ರಾಮ್ ಸನ್ನುರ್ಕರ್ ಈ ಚಿತ್ರದ ನಿರ್ಮಾಪಕರು. ವ್ಯವಸಾಯ ಹಾಗೂ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವರು. ನಿರ್ದೇಶಕ ಎ ಪರಮೇಶ್ವರ್ ಅವರು ಈಗಾಗಲೇ ಹಲವು ವರ್ಷಗಳ ಕಾಲ ದೃಶ್ಯ ಮಾಧ್ಯಮದಲ್ಲಿ ಜಾಹೀರಾತುಗಳ ನಿರ್ದೇಶನದ ಅನುಭವ ಇರುವವರು. ಜೀ ಟಿ ವಿ ಗಾಗಿ, ಕನ್ನಡದ ಹೆಸರಾಂತ ನಿರ್ದೇಶಕರುಗಳಾದ ಶಷಾಂಕ್, ಗಿರಿರಾಜ, ಉಮೇಶ್, ವಿಶಾಲ್ ರಾಜ್, ಭಾಗ್ವನ್ ಅವರ್ ಬಳಿ ಸಹಾಯಕರದವರು. ಯು ಟ್ಯೂಬು ಗಾಗಿ ಅನೇಕ ನಟರುಗಳ ಲೈಫ್ ಸ್ಟೈಲ್ ವೀಡಿಯೋ ಅನ್ನು
Follow us on Google News and stay updated with the latest!
Comments
- logoutLogout
-
Contact at support@indiaglitz.com