ರೀರಿಕಾರ್ಡಿಂಗ್ ತಲುಪಿದ ರಂಗನ್ ಸ್ಟೈ
Send us your feedback to audioarticles@vaarta.com
ರಂಗ ಬಾರೋ ಸ್ಟೈಲು ರಂಗ ಬಾರೋ ಎಂದು ಚಿತ್ರಮಂದಿರಗಳಲ್ಲಿ ಕರೆಯುವ ದಿನಗಳು ಹತ್ತಿರಕ್ಕೆ ಬರುತ್ತಿದೆ. ರಂಗನ್ ಸ್ಟೈಲ್ ಇದೀಗ ಗುರುಕಿರಣ್ ಅವರ ಚಂದ್ರ ಲೇಔಟ್ ಸ್ಟುಡಿಯೋದಲ್ಲಿ ರೇ-ರೆಕಾರ್ಡಿಂಗ್ ಹಂತವನ್ನು ತಲುಪಿದೆ. ಸಂಗೀತ ನಿರ್ದೇಶಕ ಗುರುಕಿರಣ್ ಅವರು ಹಲವು ಚಿತ್ರಗಳಿಗೆ ಸಂಗೀತ ಒದಗಿಸುತ್ತಿದ್ದರು ಅವರ ಎಂದಿನ ಹೊಸ ತಂಡಕ್ಕೆ ನೀಡುವ ಪ್ರೋತ್ಸಾಹವನ್ನು ಇಲ್ಲೂ ಮುಂದುವರಿಸಿದ್ದಾರೆ.
ಆರೆಂಜ್ ಬ್ರದರ್ಸ್ ಅವರ ರಂಗನ ಸ್ಟೈಲ್ ಚಿತ್ರಕ್ಕೆ ಅಂದಿನ ರಂಗ ಇಂದಿನ ಜನಪ್ರಿಯ ಕಿಚ್ಚ ಸುದೀಪ್ ಅಭಿನಯಿಸಿದ್ದು ಗೊತ್ತೇ ಇದೆ. ರಂಗನ್ ಸ್ಟೈಲ್ ನಿರ್ದೇಶಕ ಪ್ರಶಾಂತ್ ಹೆಸರಾಂತ ನಿರ್ದೇಶಕ ಎಂ ಡಿ ಶ್ರೀಧರ್ ಅವರ ಶಿಷ್ಯ ಈ ಚಿತ್ರಕ್ಕಾಗಿ ಪ್ರೇಮ ಕಥೆ ಹಾಗೂ ಹಾಸ್ಯವನ್ನು ಬಹು ಮುಖ್ಯವಾಗಿ ಇಟ್ಟುಕೊಂಡಿದ್ದಾರೆ. ಈ ಚಿತ್ರದ ಗಂಗಮ್ಮನ ಸ್ಟೈಲ್...ಹಾಡು ವಿಪರೀತ ಜನಪ್ರಿಯತೆ ಪಡೆದು ಕೊಳ್ಳುತ್ತಿದೆ. ಹಿಂದಿ ಭಾಷೆಯ ಕಾಮಿಡೀ ಸರ್ಕಸ್ ಖ್ಯಾತಿಯ ಭಾರತಿ ಸಿಂಗ್ ಅವರು ಈ ಹಾಡಿನಲ್ಲಿ ಕುಣಿದಿದ್ದಾರೆ.
ಪ್ರದೀಪ್ ರಂಗನ ಪಾತ್ರದಲ್ಲಿ ಇದ್ದಾರೆ ರಾಣಿಯಾಗಿ ಕನ್ನಿಕಾ ತಿವಾರಿ ಅಭಿನಯಿಸಿದ್ದಾರೆ ದೀಪಿಕ ದಾಸ್ ಸಾಧು ಕೋಕಿಲ ರೇಖ ದಾಸ್ ಶರತ್ ಲೋಹಿತಾಶ್ವ ತಬಲಾ ನಾಣಿ ಹಾಗೂ ಇನ್ನಿತರರು ಇದ್ದಾರೆ. ಗುರುಕಿರಣ್ ಅವರ ಇಂಪಾದ ಸಂಗೀತ ಹೊಸ ತಂಡಕ್ಕೆ ಮ್ಯೂಜಿಕಲ್ ಲವ್ ಸ್ಟೋರಿ ಆಗುವುದಕ್ಕೂ ಸಹಾಯವಾಗಲಿದೆ ಮುರಳಿ ಗಣೇಶ್ ಮಾಸ್ಟೆರ್ ಬಾಬ್ಬಿ ಲಕ್ಷ್ಮಿ ತ್ರಿಭುವನ್ ನೃತ್ಯ ನಿರ್ದೇಶರುಗಳು ಪಿ ಆರ್ ಸೌಂದರ್ ರಾಜ್ ಅವರ ಸಂಕಲನ ರವಿ ವರ್ಮ ಅವರ ಸಹಾಸ ಸಿನೆಟೆಕ್ ಸೂರಿ ಅವರ ಛಾಯಾಗ್ರಹಣ ಮಂಜು ಮಾಂಡವ್ಯ ಅವರ ಸಂಭಾಷಣೆ ರಾಶಿ ನೀಡನ್ಜಿ ಹಾಗೂ ಎಂ 2 ಕೆ ಸಹಾಯಕ ನಿರ್ದೇಶಕರು. ಜಯಂತ್ ಕಾಯ್ಕಿಣಿ ಕವಿರಾಜ್ ವಿಜ್ಞೇಶ್ವರ ರವಿ ಸಾಹಿತ್ಯ ಒದಗಿಸಿದ್ದಾರೆ.
Follow us on Google News and stay updated with the latest!
Comments
- logoutLogout
-
Contact at support@indiaglitz.com