ಜೈ ಭಜರಂಗ ಬಲಿ ಹಿಂದಿಗೆ ಡಬ್
Send us your feedback to audioarticles@vaarta.com
ಹರಿಮೋನಿಯಂ ರೀಟ್ಸ್ ಲಾಂಛನದಲ್ಲಿ ಎಸ್.ಟಿ.ಪಾಲ್ ರಾಜ್ ಅವರು ನಿರ್ಮಿಸಿರುವ ಹಾಗೂ ರವಿವರ್ಮ ನಿರ್ದೇಶನದ ಜೈ ಭಜರಂಗ ಬಲಿ ಚಿತ್ರದ ಟ್ರೈಲರ್ ನವಂಬರ್ ಮೊದಲವಾರದಲ್ಲಿ ಪ್ರೇಕ್ಷಕರಿಗಾಗಿ ಬಿಡುಗಡೆಯಾಗಲಿದೆ. ಈ ಚಿತ್ರದ ಟ್ರೈಲರ್ ವೀಕ್ಷಿಸಿದ ವಿತರಕರೊಬ್ಬರು ಈ ಚಿತ್ರವನ್ನು ಹಿಂದಿಗೆ ಡಬ್ ಮಾಡಲು ಮುಂದಾಗಿದ್ದಾರೆ. ಈ ಚಿತ್ರದ ಹಕ್ಕನ್ನು ಹದಿನೈದು ಲಕ್ಷ ಕೊಟ್ಟು ಖರೀದಿಸಿದ್ದಾರೆ. ನಾಯಕ ಅಜಯ್ ರಾವ್ ಅಭಿನಯದ ಚಿತ್ರ ಮೊದಲ ಬಾರಿಗೆ ಹಿಂದಿಗೆ ಡಬ್ ಆಗುತ್ತಿದೆ.
ಸಂಗಮ ಚಿತ್ರದ ನಂತರ ರವಿವರ್ಮ ಅವರು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಎ.ವೆಂಕಟೇಶ್ ಅವರ ಛಾಯಾಗ್ರಹಣ,ಗಣೇಶ್ ಸಂಕಲನ,ಇಮ್ರಾನ್,ಕಲೈ ನೃತ್ಯ ನಿರ್ದೇಶನ ರವಿವರ್ಮ,ಡಿಫ಼ರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮೋಹನ್ ಬಿ.ಕೆರೆ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಬರೆದರೆ ಸಂಭಾಷಣೆಯನ್ನು ವಿನಾಯಕರಾಮ ಕಲಗಾರು ಬರೆದಿದ್ದಾರೆ.
ಅಜಯ್ರಾವ್, ಸಿಂಧೂಲೋಕನಾಥ್, ಅನಂತನಾಗ್,ರವಿಶಂಕರ್, ಶೋಭ್ರಾಜ್, ಆದಿಲೋಕೇಶ್, ಬುಲೆಟ್ಪ್ರಕಾಶ್, ಮಿತ್ರ, ಅರುಣ್ಸಾಗರ್, ಶ್ರುತಿನಾಯ್ಡು, ಟೆನ್ನಿಸ್ಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Follow us on Google News and stay updated with the latest!
Comments
- logoutLogout
-
Contact at support@indiaglitz.com