3 ಸಿನೆಮಗಳು ರೆಡಿ
Send us your feedback to audioarticles@vaarta.com
ಸೆನ್ಸಾರ್ ಮಂಡಳಿ ಚುರುಕಾದಂತೆ,25 ಸಿನೆಮಗಳು ಒಂದರ ಹಿಂದೆ ಒಂದು ಸೆನ್ಸಾರ್ ಒಪ್ಪಿಗೆ ಪಡೆಯುತ್ತಾ ಇದ್ದಂತೆ ಈಗ ಮತ್ತೆ ಸಿನೆಮಾ ಮಳೆ ಶುರು ಆಗಲಿದೆ.
ಬರುವ ವಾರಕ್ಕೆ ಈಗಾಗಲೇ ತಿರುಪತಿ ಎಕ್ಸ್ ಪ್ರೆಸ್,ಇಂಗಳೆ ಮಾರ್ಗ ಹಾಗೂ ಜಗ್ಗಿ ಬಿಡುಗಡೆಗೆ ನಿಂತಿದೆ. ಈ ಮೂರರಲ್ಲಿ ಶೈಲೇಂದ್ರ ಬಾಬು ಅವರ ತಿರುಪತಿ....ಒಂದೇ ನುರಿತ ನಿರ್ಮಾಪಕರು. ಮಿಕ್ಕ ಎರಡು ಸಿನೆಮಾಗಳು ಹೊಸಬರ ಚಿತ್ರ.
ತಿರುಪತಿ ಎಕ್ಸ್ ಪ್ರೆಸ್ ದಿಲ್ ವಾಲ ಚಿತ್ರದ ನಾಯಕ ಸುಮಂತ್ ನಾಯಕರಾಗಿ ಅಭಿನಯಿಸಿರುವ ತಿರುಪತಿ ಎಕ್ಸ್ ಪ್ರೆಸ್ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸೆಪ್ಟಂಬರ್ ಮೊದಲವಾರದಲ್ಲಿ ತೆರೆಗೆ ಬರಲಿದೆ.ಶೈಲೇಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶೈಲೇಂದ್ರಬಾಬು ಅವರು ನಿರ್ಮಿಸಿರುವ ಈ ಚಿತ್ರವನ್ನು ಪಿ.ಕುಮಾರ್ ನಿರ್ದೇಶಿಸಿದ್ದಾರೆ.ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರುವ ತಿರುಪತಿ ಎಕ್ಸ್ ಪ್ರೆಸ್ ಗೆ ಜಗದೀಶ್ ವಾಲಿ ಅವರ ಛಾಯಾಗ್ರಹಣವಿದೆ. ಗೌತಮ್ ರಾಜ್ ಸಂಕಲನ,ಕಣ್ಣನ್ ಸಾಹಸ ನಿರ್ದೇಶನ ಹಾಗೂ ಮುರಳಿ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸುಮಂತ್,ಕೃತಿ ಖರಬಂದ,ಸಾಧುಕೋಕಿಲ,ಬುಲೆಟ್ ಪ್ರಕಾಶ್,ಅಶೋಕ್ ಮುಂತಾದವರಿದ್ದಾರೆ.
ಜಗ್ಗಿ ಅಭಿನಂದನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್.ಎನ್.ಎಸ್ ಶ್ರೀನಿವಾಸ ಅವರು ನಿರ್ಮಿಸಿರುವ,ವಿ.ಎಂ.ರಾಜು ನಿರ್ದೇಶನದ ಜಗ್ಗಿ ಚಿತ್ರ ಸೆಪ್ಟಂಬರ್ ಮೊದಲವಾರದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ನಿರ್ದೇಶಕರೆ ಚಿತ್ರಕಥೆ,ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಸುನೀಲ್ ರಾಜ್ ಕಥೆ ಬರೆದಿದ್ದಾರೆ. ಎಲ್ವಿನ್ ಜೋಶ್ವ ಸಂಗೀತ ನಿರ್ದೇಶನ,ಮಂಜುಭಾಸ್ಕರ್ ಅವರ ಸಹನಿರ್ಮಾಣವಿರುವ ಈ ಚಿತ್ರಕ್ಕೆ ರಮೇಶ್ ಕೊಯಿರ ಛಾಯಾಗ್ರಹಣ,ಈಶ್ವರ್ ಸಂಕಲನ,ಮದನ್ ಹರಿಣಿ,ಹರಿಕೃಷ್ಣ ನೃತ್ಯ ನಿರ್ದೇಶನ ಹಾಗೂ ಕೌರವ ವೆಂಕಟೇಶ್,ಹ್ಯ
Follow us on Google News and stay updated with the latest!
Comments
- logoutLogout
-
Contact at support@indiaglitz.com