ಜಗ್ಗಿ ಯು/ಎ ಪತ್ರ
Send us your feedback to audioarticles@vaarta.com
ಅಭಿನಂದನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್.ಎನ್.ಎಸ್ ಶ್ರೀನಿವಾಸ ಅವರು ನಿರ್ಮಿಸಿರುವ, ವಿ.ಎಂ.ರಾಜು ನಿರ್ದೇಶನದ ಜಗ್ಗಿ ಚಿತ್ರದ ಸೆನ್ಸಾರ್ ಮುಂಬೈನಲ್ಲಿ ನಡೆದಿದೆ. ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರ ನೀಡಿದೆ. ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ನಿರ್ದೇಶಕರೆ ಚಿತ್ರಕಥೆ,ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಸುನೀಲ್ ರಾಜ್ ಕಥೆ ಬರೆದಿದ್ದಾರೆ. ಎಲ್ವಿನ್ ಜೋಶ್ವ ಸಂಗೀತ ನಿರ್ದೇಶನ, ಮಂಜುಭಾಸ್ಕರ್ ಅವರ ಸಹನಿರ್ಮಾಣವಿರುವ ಈ ಚಿತ್ರಕ್ಕೆ ರಮೇಶ್ ಕೊಯಿರ ಛಾಯಾಗ್ರಹಣ,ಈಶ್ವರ್ ಸಂಕಲನ,ಮದನ್ ಹರಿಣಿ,ಹರಿಕೃಷ್ಣ ನೃತ್ಯ ನಿರ್ದೇಶನ ಹಾಗೂ ಕೌರವ ವೆಂಕಟೇಶ್,ಹ್ಯಾರಿಸ್ ಜಾನಿ ಸಾಹಸ ನಿರ್ದೇಶನವಿದೆ.
ಸುನೀಲ್ ರಾಜ್,ಅಹನಾ,ರಮೇಶ್ ಭಟ್,ಶರತ್ ಲೋಹಿತಾಶ್ವ,ಮುನಿ,ಬುಲೆಟ್ ಪ್ರಕಾಶ್,ಪೆಟ್ರೋಲ್ ಪ್ರಸನ್ನ,ಮೋಹನ್ ಜುನೇಜ,ವಿಶ್ವ,ಕೆಂಪೇಗೌಡ,ಪ್ರಕಾಶ್,ಎಂ.ಎನ್.ಲಕ್ಷ್ಮೀದೇವಮ್ಮ,ಸಂಗೀತ,ರೋಷಿಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Follow us on Google News and stay updated with the latest!
Comments
- logoutLogout
-
Contact at support@indiaglitz.com