ಮಹಾಕಾಳಿ ಲೆಹ್ ಲಡಕ್ ಚಿತ್ರಣ
Send us your feedback to audioarticles@vaarta.com
17000 ಅಡಿ ಎತ್ತರದಲ್ಲಿ ಮಹಾ ಕಾಳಿ ಕನ್ನಡ ಸಿನೆಮಾ ಒಂದು ಹಾಡನ್ನು ಲೆಹ್ ಹಾಗೂ ಲಡಕ್ ಸ್ಥಳಗಳಲ್ಲಿ ಚಿತ್ರೀಕರಣ ಮುಗಿಸಿ ಬಂದಿದೆ. 25 ಜನರ ಚಿತ್ರ ತಂಡ ಆರು ದಿವಸಗಳ ಕಾಲ ಒಂದು ಹಾಡನ್ನು ಹೊಸ ನಾಯಕ ನಾಯಕಿ ಮೇಲೆ ಚಿತ್ರಿಸಿಕೊಂಡು ಬಂದಿದೆ. ಮಾಲಾಶ್ರೀ ಮಹಾ ಕಾಳಿ ಆಗಿ ಈ ಚಿತ್ರದಲ್ಲಿ ಅವತಾರ ಎತ್ತಿದ್ದಾರೆ.
ಸಧ್ಯಕ್ಕೆ ಸಿಂಹಾದ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್ ಕಶ್ಯಪ್ ಅವರು ನಿರ್ಮಿಸುತ್ತಿರುವ ಮಾಹಾಕಾಳಿ ಚಿತ್ರಕ್ಕೆ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಮುಕ್ತಾಯವಾಗಿದೆ. ಒಂದು ಹಾಡಿನ ಚಿತ್ರೀಕರಣ ಬಾಕಿಯಿದೆ. ಸದ್ಯದಲ್ಲೇ ಐದು ಸೆಟ್ ಗಳಲ್ಲಿ ಆ ಹಾಡಿನ ಚಿತ್ರೀಕರಣ ನಡೆಸುವ ಯೋಜನೆ ಇದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಅಪಾರ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಮಾಲಾಶ್ರೀ ಅಭಿನಯಿಸುತ್ತಿದ್ದಾರೆ. ಶ್ರೀನಿವಾಸಮೂರ್ತಿ, ಎಂ.ಎನ್.ಲಕ್ಷ್ಮೀದೇವಿ,ಪದ್ಮಿನಿಪ್ರಕಾಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಅಜಯ್ ಕುಮಾರ್ ಅವರು ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರವನ್ನು ಎಸ್.ಮಹೇಂದರ್ ನಿರ್ದೇಶಿಸುತ್ತಿದ್ದಾರೆ. ಸೆಲ್ವಂ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅನಿಲ್ ಕುಮಾರ್ ಸಂಭಾಷಣೆ ಬರೆದಿದ್ದಾರೆ. ಥ್ರಿಲ್ಲರ್ ಮಂಜು, ಪಳನಿರಾಜ್ ಅವರ ಸಾಹಸ ನಿರ್ದೇಶನ ಮಾಹಾಕಾಳಿ ಚಿತ್ರಕ್ಕಿದೆ.
Follow us on Google News and stay updated with the latest!
Comments
- logoutLogout
-
Contact at support@indiaglitz.com