ಈ ವಾರ ಪ್ರೀತಿ ಗೀತಿ ಇತ್ಯಾದಿ
Send us your feedback to audioarticles@vaarta.com
ಫಾಂಟಸಿ ಸ್ಕ್ರೀನ್ಸ್ ಹಾಗೂ ಯೋಗರಾಜ್ ಮೂವೀಸ್ ವತಿಯಿಂದ ಬಿಡುಗಡೆ ಆಗುತ್ತಿರುವ ಪ್ರೀತಿ ಗೀತಿ ಇತ್ಯಾದಿ ಕನ್ನಡ ಚಿತ್ರದಿಂದ ಹೊಸ ನಿರ್ಮಾಪಕ ವಿಜಯಕುಮಾರ್ ಮಂಗ್ಸುಳೆ, ಹೊಸ ನಿರ್ದೇಶಕ ವೀರೇಂದ್ರ, ಖ್ಯಾತ ನಿರ್ದೇಶಕ ಪವನ್ ವಡೆಯರ್ ನಟನಾಗಿ, ಹೊಸ ನಾಯಕಿ ಸಂಗೀತ ಭಟ್ ಪರಿಚಯ ಆಗುತ್ತಿದ್ದಾರೆ.
ಮತ್ತೊಬ್ಬ ಯೋಗರಾಜ್ ಭಟ್ ಅವರ ಶಿಷ್ಯ ವೀರೇಂದ್ರ ನಿರ್ದೇಶಕ ಪವನ್ ವಡೆಯರ್ ಅವರನ್ನು ಈ ಸಿನೆಮಾದಲ್ಲಿ ಬಾರ್ ಒಂದರಲ್ಲಿ ಉದ್ಯೋಗಿ ಆಗಿ ಕಾಣಿಸುತ್ತಿದ್ದಾರೆ.ವೀರೇಂದ್ರ ಅವರ ಚಿತ್ರಕ್ಕೆ ಸಂಭಾಷಣೆ ಬರೆದಿರುವರು.
ಕೇವಲ ಎಂಟು ಪಾತ್ರದಾರಿಗಳನ್ನು ಒಳಗೊಂಡ ಈ ಪ್ರೀತಿ ಗೀತಿ ಇತ್ಯಾದಿ ಚಿತ್ರದ ನಾಯಕಿ ಸಂಗೀತ ಭಟ್. ಯೋಗರಾಜ್ ಭಟ್ ಅವರು ಒಳ್ಳೇದು ಹಾಗೂ ಕೆಟ್ಟದ್ದರ ಬಗ್ಗೆ ಒಂದು ಹಾಡನ್ನು ರಚಿಸಿದ್ದಾರೆ. ಜಯಂತ್ ಕಾಯ್ಕಿಣಿ ಸಹ ಈ ಚಿತ್ರಕ್ಕೆ ಸಾಹಿತ್ಯ ಒದಗಿಸಿದ್ದಾರೆ.
ವೀರ ಸಮರ್ಥ ಅವರ ಸಂಗೀತವಿದೆ, ಭಾಸ್ಕರ್ ರೆಡ್ಡಿ ಅವರು ಛಾಯಾಗ್ರಾಹಕರು ರಂಗಾಯಣ ರಘು, ವಿನಯಪ್ರಕಾಶ್, ಮಂಜುನಾಥ್ ಗೌಡ, ನಭ ನಟೇಶ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
ಜಯಣ್ಣ ಫಿಲ್ಮ್ಸ್ ಈ ಚಿತ್ರದ ಹಂಚಿಕೆ ಉಸ್ತುವಾರಿ ವಹಿಸಿದೆ.
Follow us on Google News and stay updated with the latest!
Comments
- logoutLogout
-
Contact at support@indiaglitz.com