ಟೈಟಲ್ ಬೇಕಾ ನೇಹ ಪಾಟಿಲ್ ಸಾಕ!
Send us your feedback to audioarticles@vaarta.com
ವಾರೆ ವಾಹ್! ಇಂದಿನ ಯುಗದಲ್ಲಿ ಸಿನೆಮಾ ಕೆಟ್ಟದಾಗಿದ್ರೆ ಇಂತ ಸಿನೆಮಾ ಬೇಕಾ ಅಂತ ಕೇಳುವುದಿದೆ. ಅದರಲ್ಲಿ ಈಗ ಟೈಟಲ್ ಬೇಕಾ ಎಂಬುದು ಶೀರ್ಷಿಕೆ. ಅರ್ಥಾತ್ ಚಿತ್ರಕ್ಕೆ ಶೀರ್ಷಿಕೆ ಬೇಕಾ ಎಂದು ಪ್ರೇಕ್ಷಕನನ್ನು ಕೇಳುವಹಾಗಿದೆ. ಶೀರ್ಷಿಕೆ ಇದ್ದರೇನು ಇಲ್ಲದಿದ್ದರೇನು ಪ್ರೇಕ್ಷಕ ಬಯಸೋದು ಕೇವಲ ಮನರಂಜನೆ ಅಲ್ಲವೇ!
ಸಿನೆಮಾದ ಶೀರ್ಷಿಕೆಯೇ ಹೀಗಿದ್ದರೆ. ಹೌದು. ವೀರಭದ್ರೇಶ್ವರ ಮೂವಿ ಮಕೇರ್ಸ್ ಅಡಿಯಲ್ಲಿ ನಿರ್ಮಾಣ ಅಗಲಿರುವ ಸಿನೆಮಾದ ಶೀರ್ಷಿಕೆಯೇ ಟೈಟಲ್ ಬೇಕಾ. ಆನಂದ್ ರಾಜ್ ಅವರು ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಹಾಗೂ ನಿರ್ದೇಶನ ಜವಾಬ್ದಾರಿ ಅನ್ನು ಹೊತ್ತಿರುವವರು. ಈ ಚಿತ್ರ ನಿರ್ಮಾಣ ಮಾಡಲು ಸಿದ್ದವಾಗಿರುವವರು ನವರಂಗಿ ಸಿನೆಮಾದ ಜೋಡಿಗಳಾದ ಮಹಾದೇವಪ್ಪ ಹಲಗತ್ತಿ ಹಾಗೂ ಸಂಗಮೇಶ್ ಹಲಗತ್ತಿ.
ಟೈಟಿಲ್ ಬೇಕಾ ಸಿನೆಮಾದ ಮುಹೂರ್ತ ಕಳೆದ ವಾರ ಶ್ರೀ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಜರುಗಿದೆ. ಕನ್ನಡದಲ್ಲಿ ಈಗ ಹೆಚ್ಚು ಓಡಾಡಿಕೊಂಡು ಸಿಕ್ಕ ಅವಕಾಶಗಳನ್ನು ಬಾಚುತ್ತಿರುವ ನೇಹ ಪಾಟೀಲ್ ಈ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿರುವವರು.
ಈ ಚಿತ್ರದಿಂದ ಆಯುಶ್ ನಾಯಕನಾಗಿ ಪರಿಚಯ ಆಗುತ್ತಿದ್ದಾರೆ. ಸಾಧು ಕೋಕಿಲ, ಶೋಬಾರಾಜ್, ತೀರ್ಥಹಳ್ಳಿ ಸುಧಿ, ಬಿರಾದರ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
ಸಂಗೀತ ನೋಬಿನ್ ಪಾಲ್, ಛಾಯಾಗ್ರಹಣ ರಾಕೇಶ್ ತಿಲಕ್, ಸಂಕಲನ ಸನತ್ ಸುರೇಶ್, ನೃತ್ಯ ನಂದ ಹಾಗೂ ಕಲೈ ಒದಗಿಸಲಿದ್ದಾರೆ.
Follow us on Google News and stay updated with the latest!
Comments
- logoutLogout
-
Contact at support@indiaglitz.com