ಮತ್ತೊಂದು ಸವಾಲ್
Send us your feedback to audioarticles@vaarta.com
ಕನ್ನಡ ಸಿನೆಮಗಳಲ್ಲಿ ಅದೆಂತಹ ಸವಾಲುಗಳನ್ನು ತೆರೆಯ ಮೇಲೆ ಪ್ರೇಕ್ಷಕ ನೋಡಿಲ್ಲ ಹೇಳಿ. ಸಂಪತ್ತಿಗೆ ಸವಾಲ್, ಸ್ನೇಹಿತರ ಸವಾಲ್, ಸಹೋದರರ ಸವಾಲ್, ಸಿರಿತನಕ್ಕೆ ಸವಾಲ್, ಪ್ರೇಮಿಗಳ ಸವಾಲ್, ನ್ಯಾಯಕ್ಕಾಗಿ ಸವಾಲ್ ಕನ್ನಡ ಸಿನೆಮಗಳು ಬಂದು ಹೋಗಿವೆ. ಅದರಲ್ಲಿ ಇಂದಿಗೂ ಜನಪ್ರಿಯ ಅಣ್ಣಾವ್ರ ಸಂಪತ್ತಿಗೆ ಸವಾಲ್ ಹಾಗೂ ವಿಷ್ಣು ಹಾಗೂ ರಜನಿಕಾಂತ್ ಅವರ ಅಭಿನಯದ ಸಹೋದರರ ಸವಾಲ್.
ಈಗ ಜಸ್ಟ್ ಸವಾಲ್ ಬರುತ್ತಿದೆ. ಇದೆ ಶುಕ್ರವಾರ. ನ್ಯಾಯ ಕೊಡಿಸಲು ಕಟಕಟೆಗೆ ಬರುವವರು ಯಂಗ್ ಡೈನಮಿಕ್ ಪ್ರಜ್ವಲ್ ದೇವರಾಜ್.
ಶ್ರೀ ತಿರುಮಲಾ ಮೂವಿ ಮಕೇರ್ಸ್ ಅವರ ಸವಾಲ್ ಮನೆ ಮಂದಿಗೆಲ್ಲ ಮನರಂಜನೆ ನೀಡಲು ಈ ವಾರ ತೆರೆ ಕಾಣುತ್ತಿದೆ. ನಾಯಕ ಪ್ರಜ್ವಲ್ ಕಟಕಟೆ ಅಲ್ಲಿ ಎದುರಿಸುವ ಸವಾಲ್ ಜೊತೆಗೆ ಗಟ್ಟಿ ಮುಟ್ಟಾದ ಖಳ ನಟ ರಾಜ್ ಕೆ ಪುರೋಹಿತ್ ಸವಾಲ್ ಎದುರಿಸುವ ಸಂಧರ್ಭ ಸಿನೆಮಾದಲ್ಲಿ ಕಾಣಲಿದೆ. ಸವಾಲ್ ನಾಯಕ ಕೋರ್ಟಿನ ಕಟಕಟೆ ಅಲ್ಲಿ ಅದೆಂತಹ ಸವಾಲುಗಳನ್ನು ಎದುರಿಸುತ್ತಾನೆ ಹಾಗೂ ಹಾಕುತ್ತಾನೆ ಎಂಬುದು ಕುತೂಹಲದ ವಿಚಾರ. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಮತ್ತೊಮ್ಮೆ ವಕೀಲನಾಗಿ ಅಭಿನಯಿಸಿದ್ದಾರೆ. ಸೋನ ಚಿತ್ರದ ನಾಯಕಿ, ಮುತುರಾಜ್, ಶೋಬಾರಾಜ್, ಅಭಯ್, ಮನೋಹರ್, ರಾಜ್ ಕೆ ಪುರೋಹಿತ್, ರೇಖ ದಾಸ್, ಸಾಧು ಕೋಕಿಲ, ಬುಲ್ಲೆಟ್ ಪ್ರಾಕಾಶ್, ರಾಜು ತಾಳಿಕೋಟೆ, ಅಚ್ಯುತ್ ಕುಮಾರ್, ಟೆನ್ನಿಸ್ ಕೃಷ್ಣ, ಉಮೇಶ್ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ. ಭೂಮಿ ತಾಯಿಯ ಸೇವೆಯಲ್ಲಿ ತೊಡಗಿ ರೈತನಾಗಿರುವ ಹಾಗೂ ಪಂಚಾಯತಿ ಸದಸ್ಯರು ಆಗಿರುವ ಕೆ ತಿಮ್ಮರಾಜು ಚಿತ್ರದ ನಿರ್ಮಾಪಕರು. ಚಿತ್ರದ ಕಥೆ,ಚಿತ್ರಕಥೆ, ನಿರ್ದೇಶನ ಧನಂಜಯ ಬಾಲಾಜಿ ಅವರದು. ವಿ ಮನೋಹರ್ ಅವರ ಸಂಗೀತ, ಪಿ ಕೆ ಎಚ್ ದಾಸ್ ಅವರ ಛಾಯಾಗ್ರಹಣ, ಧನಂಜಯ ಬಾಲಾಜಿ, ಕೆ ವೆಂಕಟೇಶ್, ಪ್ರತಾಪ್, ವಿಶ್ವ, ರಾಜು ಅವರ ಸಂಭಾಷಣೆ, ಮನೋಹರ್, ಯೋಗರಾಜ್ ಭಟ್, ಅಪ್ಪು, ಧನಂಜಯ ಬಾಲಾಜಿ ಅವರ ಗೀತ ಸಾಹಿತ್ಯ, ವಿನೋದ್ ಮನೋಹರ್ ಅವರ Ņ
Follow us on Google News and stay updated with the latest!
Comments
- logoutLogout
-
Contact at support@indiaglitz.com