ರಮ್ಯ- ಅಂಬಿ ಆಗಮನ ನಿರೀಕ್ಷೆ!
Send us your feedback to audioarticles@vaarta.com
ಎಂತಹ ಸಮಯದಲ್ಲಿ ಡಾಕ್ಟರ್ ಅಂಬರೀಶ್ ಸಿಂಗಾಪುರ್ ಅಲ್ಲಿ ತೀವ್ರ ಅಸ್ವಸ್ಥೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಅಂದರೆ ಇತ್ತ ಕಡೆ ಅವರಿಲ್ಲದೆ ಮಂಡ್ಯ ಲೋಕ ಸಭಾ ಚುನಾವಣೆಗೆ ನಾಯಕಿ ಕಮ್ ರಾಜಕಾರಿಣಿ ರಮ್ಯ ಅವರು ಚಡಪಡಿಸುತ್ತಿದ್ದಾರೆ.
ಡಾಕ್ಟರ್ ಅಂಬರೀಶ್ ಅವರು ಮಂಡ್ಯ ಲೋಕ ಸಭಾ ಚುನಾವಣೆ ಇಂದ ಮೂರು ಬಾರಿ ಗೆದ್ದು ಬಂದವರು, ಶ್ರೀರಂಗಪಟ್ಟಣ ವಿಧಾನ ಸಭೆ ಅಲ್ಲಿ ಸೋತವರು, ಕಳೆದ ಬೈ ಎಲಕ್ಷನ್ ಅಲ್ಲಿ ರಮ್ಯ ಅವರು ಗೆಲ್ಲುವುದಕ್ಕೂ ಇವರ ಪಾಲಿದೆ.
ಅಂಬರೀಶ್ ಬರದೇ ಇದ್ದರೆ ಚುನಾವಣೆ ಪ್ರಾಚಾರಕ್ಕೆ ರಮ್ಯ ಅವರಿಗೆ ದೊಡ್ಡ ಪೆಟ್ಟು. ಕಳೆದ ಬಾರಿ ಹೈ ಕಮಾಂಡ್ ಹೇಳಿದಕ್ಕೆ ಅಂಬರೀಶ್ ಅವರು ತುಟಿಕ್ ಪಿಟಿಕ್ ಅನ್ನದೆ ರಮ್ಯ ಅವರು ಗೆಲ್ಲಲು ಸಹಾಯವಾದರು.
ಈಗ 5 ವರ್ಷದ ಟರ್ಮ್ ಗೆ ರಮ್ಯ ಅವರು ಗೆಲ್ಲಲೇಬೇಕು. ಅದಕ್ಕೆ ಅಂಬಿ ಸಹಾಯ ಸಹ ಬೇಕು ಎಂಬುದು ನಿಶ್ಚಯ.
ಆದರೆ ಬುದ್ದಿವಂತ, ಸುಂದರ ನಟಿ ರಮ್ಯ ಅವರು ಕಳೆದ ಆರೇಳು ತಿಂಗಳಿನಲ್ಲಿ ಒಳ್ಳೆಯ ಕೆಲಸ ಮಾಡಿರುವುದು, ಮಂಡ್ಯ ಜಿಲ್ಲೆಯಲ್ಲೇ ನೆಲಸಿರುವುದು ಅವರಿಗೆ ಶೋಬೆ ತರುವುದು ಸತ್ಯ. ಅವರು ಸಹ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳನ್ನು ಎಡಬಿಡದೆ ಭೇಟಿ ಮಾಡಿದ್ದಾರೆ, ಜನರ ಕಷ್ಟ ಕಾರ್ಪಣ್ಯಗಳನ್ನು ಕೇಳಿದ್ದಾರೆ, ರಾಹುಲ್ ಗಾಂಧಿ ಅವರ ಬೆಂಗಾವಲು ಹಾಗೂ ಜೊತೆಗೆ ಮಂಡ್ಯದ ಮತ್ತೊಬ್ಬ ನಿಸ್ಸೀಮ ರಾಜಕಾರಿಣಿ ಎಸ್ ಎಂ ಕೃಷ್ಣ ಅವರ ಸಹಕಾರ ಸಹ ರಮ್ಯ ಅವರಿಗೆ ಇದ್ದೇ ಇದೆ.
ಅದೇನೇ ಇರಲಿ ನಾನು ನನ್ನ ಕೆಲಸವೆ ಮುಖ್ಯ ಯಾರೆ ನನಗೆ ಎದುರಾಗಲಿ ಎಂದು ಮೊನ್ನೆ ತಾನೇ ಹೇಳಿಕೊಂಡಿದ್ದರು ರಮ್ಯ.
Follow us on Google News and stay updated with the latest!
Comments
- logoutLogout
-
Contact at support@indiaglitz.com