ನಿನಗಿದ್ದರೆ ನಾ ನಿನಗೆ ಸುದೀಪ್!
Send us your feedback to audioarticles@vaarta.com
ಕನ್ನಡದ ಸುಪ್ರಸಿದ್ದ ನಟ , ನಿರ್ದೇಶಕ , ನಿರ್ಮಾಪಕ ಕಿಚ್ಚ ಸುದೀಪ್ ಬದಲಾಗಿದ್ದಾರೆಯೇ! ಬದಲಾವಣೆ ಜಗತ್ತಿನ ನಿಯಮ. ಅದು ಸರಿ , ಬದಲಾವಣೆ ಇಂದ ಉನ್ನತ ಯೋಚನೆ, ಅನ್ವೇಷಣೆ, ಮಟ್ಟ ಏರುವಂತೆ ಆಗಬೇಕು. ಅದಕ್ಕೆ ಈ ಕಿಚ್ಚ ಸುದೀಪ್ ಒಂದು ದೊಡ್ಡ ಉದಾಹರಣೆಯಾಗಿ ಮೊನ್ನೆ ರಂಗನ್ ಸ್ಟೈಲ್ ಧ್ವನಿ ಸುರುಳಿ ಸಮಾರಂಭದಲ್ಲಿ ಕಂಡು ಬಂದರು.
ಸುದೀಪ್ ಒಮ್ಮೆ ಅವರು ಬಂದ ದಾರಿಯನ್ನು ನೆನೆದರು. ನಾನು ಎರಡೂವರೆ ವರ್ಷದಲ್ಲಿ ವೃತ್ತಿಯಲ್ಲಿ ಉನ್ನತಿಯನ್ನು ಕಂಡೆ. ಎನಿಸಲಾರದ ಸಂತೋಷ ಒದಗಿಬಂದಿತು. ಅವೆಲ್ಲ ಹೊರ ರಾಜ್ಯಗಳಲ್ಲಿ ಎಕ್ಸ್ಪೆಕ್ಟ್ ಮಾಡದಷ್ಟು ದಕ್ಕಿತು. ಆದರೆ ನಮ್ಮವರು ನನ್ನನ್ನು ವಿಚಾರಿಸಿಕೊಳ್ಳುತಿದ್ದಾಗ ನನಗೆ ತಿಳಿದು ಬಂದಿದ್ದು ನನ್ನನ್ನು ಎಷ್ಟು ಪ್ರೀತಿಸುತ್ತಾರೆ ಎಂದು. ಅಂತಹ ಪರಿಸ್ಥಿಗಳು ಜೀವನದಲ್ಲಿ ಕಾಣಬೇಕಂದರೆ ಪ್ರೀತಿ ವಾತ್ಸಲ್ಯವನ್ನು ಗಳಿಸಿರಲೇಬೇಕು. ಅದು ನನಗೆ ಸಿಕ್ಕಿದೆ ಅಂತ ತೋರಿಬಂತು. ಅದಕ್ಕಾಗಿ ನಾನು ನನ್ನ ನಾಡು ಜನ ಈ ಪ್ರೀತಿಯನ್ನು ಮರೆಯಲು ಸಾಧ್ಯವೇ ಇಲ್ಲ.
ಅದಕ್ಕಾಗಿಯೇ ನನ್ನವರು ನಾನು ಇರಬೇಕು ಎಂದು ಹೇಳಿದಾಗ ಬಂದಿದ್ದೇನೆ. ಚಿತ್ರ ರಂಗದ ಸ್ನೇಹಿತರು ಬಹಳಷ್ಣು ಜನ ನನ್ನವರು ಇದ್ದಾರೆ. ಅದಕ್ಕೆಲ್ಲ ನನ್ನ ಪಾಲಿಸಿ ಏನಪ್ಪಾ ಅಂದರೆ ನಾನು ನೀವು ಕರೆದಾಗ ಬಂದಿದ್ದೇನೆ ಹಾಗಾಗಿ ನಾಳೆ ನೀವು ಉನ್ನತಿ ಪಡೆದಾಗ ಬೇರೆಯವರು ನಿಮ್ಮನ್ನು ಕರೆದಾಗ ಹೋಗಿ. ಇದು ಜೀವನದ ಕ್ರಮ. ನೀ ನಾನಾಗಿದ್ದಾರೆ ನಾ ನಿನಗೆ ಎಂಬ ನಿಯಮ.
ಅದಕ್ಕೆ ಹೇಳುವುದು ಸುದೀಪ್ ಅಂತಹ ನಟ ಕೇವಲ ಪಾತ್ರಗಳಿಂದ ಬೆಳೆಯುತ್ತಾ ಹೋಗಿಲ್ಲ. ಹೆಚ್ಚು ಪ್ರೌಡಿಮೆ ಸಹ ಅವರಿಗೆ ಬಂದಿದೆ. ಸ್ನೇಹಿತರು ಕರೆದರು ಅಂದಾಗ ನಾನು ಹ್ಯಾಪ್ಪಿ ಆಗಿ ಬರುವವನು. ನನ್ನ ಜೊತೆಯಲ್ಲಿ ಪ್ರೀತಿ ವಿಶ್ವಾಸವನ್ನು ಕ್ಯಾರಿ ಮಾಡುತ್ತೇನೆ ಅಂತಾರೆ ಸುದೀಪ್. ಈ ಸಕ್ಸಸ್ ಅನ್ನು ಡಿಫೈನ್ ಮಾಡಬೇಡಿ ಬಂದದ್ರಲ್ಲಿ ಖುಷಿ ಪಡಿಯಿರಿ ಎಂಬುದು ಸುದೀಪ್ ಅವರ ಮತ್ತೊಂದು ಬುದ್ದಿವಂತಿಕ
Follow us on Google News and stay updated with the latest!
Comments
- logoutLogout
-
Contact at support@indiaglitz.com