ಗದಾ ಪ್ರಸಂಗ ಅಷ್ಟೇ!
Send us your feedback to audioarticles@vaarta.com
ಅಯ್ಯೋ ಮೊನ್ನೆ ನೀವು ನೋಡಬೇಕಿತ್ತು ಭಜರಂಗಿ ಧ್ವನಿ ಸುರುಳಿ ಸಮಾರಂಭ. ಬಂದ ನಾಯಕರುಗಳಿಗೆಲ್ಲ ಗದೆ ನೀಡಿ ಸ್ವಾಗತ ಮಾಡಲಾಯಿತು. ಎಲ್ಲಿ ಈ ಅರುಣ್ ಸಾಗರ್ ಅವರು ಇರುತ್ತಾರೋ ಅಲ್ಲೆಲ್ಲ ನೀವು ಏನಾದ್ರೂ ತಮಾಷೆ ಅಪೇಕ್ಷಿಸಬಹುದು. ಎಲ್ಲಿ ರಮೇಶ್ ಅರವಿಂದ್ ಇರುತ್ತಾರೋ ಅಲೆಲ್ಲ ಮಾತಿನಲ್ಲಿ ವೈವಿಧ್ಯತೆ ಕಂಡ ಹಾಗೆ!
ಚಿತ್ರದ ಹೆಸರು ಭಜರಂಗಿ ಆದ್ದರಿಂದ ಹನುಮಂತನ ವೇಷದಲ್ಲಿ ಅರುಣ್ ಸಾಗರ್ ಒಂದು ಗದೆ ತಂದಿದ್ರಪ್ಪ. ಪಳಪಳ ಹೊಳೆಯುವ ಗದೆಯನ್ನು ಎಲ್ಲರಿಗೂ ನೀಡಿ ಸಂತೋಷ ಗೊಂಡರು. ಎಲ್ಲ ನಾಯಕರು ಬಾಕ್ಸ್ ಆಫೀಸಿನಲ್ಲಿ ಒಂದೆಲ್ಲ ಒಂದು ರೀತಿ ಗದೆ ಹಿಡಿದು ಪ್ರಹಾರ ಮಾಡಿ ಚಿಂದಿ ಉಡಾಯಿಸಲೆಂದು ಬರುವರು ತಾನೇ. ಅದು ಬೇರೆ ಮಾತು. ಇಲ್ಲಿ ಸಿನೆಮಾದ ಶೀರ್ಷಿಕೆಗೆ ತಕ್ಕಂತೆ ಗದೆ. ಗೆಲ್ಲದಿದ್ದರೆ ಗಧೆ ಅಥವಾ ಘಾ ಅಂತಲೂ ಹೇಳುವುದುಂಟು.
ಅಂದಿನ ಜ್ಞಾನಭರತಿ ಸಭಾಂಗಣದಲ್ಲಿ ಪುನೀತ್ ರಾಜಕುಮಾರ್ ಯಷ್ ವಿಜಯ ರಾಘವೇಂದ್ರ ಆದಿತ್ಯ ಶ್ರೀನಗರ ಕಿಟ್ಟಿ,ನಿನಸಮ್ ಸತೀಶ್ ಧ್ರುವ ಸರ್ಜಾ ಗದೆ ಹಿಡಿದು ನಿಂತರು. ಅರುಣ ಸಾಗರ್ ಅವರ ಹಾಸ್ಯ ಚಟಾಕಿಗೆ ಏನು ಕಡಿಮೆ ಇರಲಿಲ್ಲ.
ಶಿವರಾಜಕುಮಾರ್ ಗೀತಾ ಶಿವರಾಜಕುಮಾರ್ ಸಹ ಆಗಮಿಸಿದ್ದರು. ಅಂದ್ರಿತಾ ರಾಯ್ ಸಹ ಅಂದು ಕಂಗೊಳಿಸಿದರು.
ಈಗಾಗಲೇ ಭಜರಂಗಿ ಚಿತ್ರದ ಮೂರು ಹಾಡುಗಳು ಜನಪ್ರಿಯತೆ ಆಗಿದೆ. ಮೂರು ಕೋಟಿಗೂ ಹೆಚ್ಚು ಸಿನೆಮಾದ ಟಿ ವಿ ಹಕ್ಕು ಮಾರಲಾಗಿದೆ ಎಂಬುದು ನಿರ್ಮಾಪಕರಾದ ನಟರಾಜ್ ಗೌಡ ಹಾಗೂ ಮಂಜುನಾಥ್ ಗೌಡ ಅವರ ಸಂತೋಷ.
Follow us on Google News and stay updated with the latest!
Comments
- logoutLogout
-
Contact at support@indiaglitz.com