ರಾಜಕೀಯ ನುಸುಳಿತು ರಮ್ಯ-ಜಗ್ಗೇಶ್!
Send us your feedback to audioarticles@vaarta.com
ನೀರ್ ದೋಸೆ ಪ್ರಾರಂಭವಾದಾಗಲೆ ಈ ಕಾಂಗ್ರೆಸ್ಸ್ ಹಾಗೂ ಈ ಬಿ ಜೆ ಪಿ ಹ್ಯಾಗಪ್ಪ ಕೆಲ್ಸ ಮಾಡ್ತಾರೆ ಎಂದು ಆಲೋಚನೆ ಮೂಡಿತ್ತು ಆ ಆಲೋಚನೆಗೆ ಇಂದು ಪುಷ್ಟೀಕರಣ ಸಿಕ್ಕಿದೆ.
ಕಾಂಗ್ರೆಸ್ ರಮ್ಯ ಬಿ ಜೆ ಪಿ ಜಗ್ಗೇಶ್ ಇಂದು ನೀರ್ ದೋಸೆ ಸಿನೆಮದಿಂದ ರಾಜಕೀಯ ನುಸುಳುವಂತೆ ದಾರಿ ಮಾಡಿದ್ದಾರೆ. ರಮ್ಯ ಎಂ ಪಿ ಆದಮೇಲೆ ಅವರು ಮೊದಲು ಒಪ್ಪಿಕೊಂಡ ಚಿತ್ರಗಳಿಗೆ ದಿನಗಳನ್ನು ಹೊಂದಾಣಿಕೆ ಮಾಡಿಕೊಡುತ್ತಿಲ್ಲ ಎಂಬುದು ವಿಚಾರ. ಅವರು ಈಗಾಗಲೇ ಸ್ವಲ್ಪ ಅಭಿನಯಿಸಿ ನಿಲ್ಲಿಸಿರುವ ವೈಶ್ಯೆ ಪಾತ್ರ ನೀರ್ ದೊಸೆ ಚಿತ್ರದಲ್ಲಿ ಅವರ ಈಮೇಜ್ ತೊಂದರೆ ಆಗಬಹುದು ಎಂದು ಪಕ್ಕಕ್ಕೆ ತಳ್ಳಿದ್ದಾರೆ ಎಂಬ ವಿಚಾರ ಹರಿದಾಡುತ್ತಿದೆ.
ರಮ್ಯ ಎಂ ಪಿ ನೀರ್ ದೋಸೆ ಗೆ ಬರದೇ ಇರುವುದನ್ನು ಗಮನಿಸಿ ನಾಯಕ ಜಗ್ಗೇಶ್ ಅವರು ಹೇಳಬೇಕ್ಕಾದನ್ನು ಹೇಳಿದ್ದಾರೆ. ಆದರೆ ಅವರು ವಿಷಯ ಪ್ರಸ್ತಾಪ ಮಾಡುವುದಕ್ಕೂ ಮುಂಚೆ ನಿರ್ದೇಶಕ ವಿಜಯಪ್ರಸಾದ್ ಅವರನ್ನು ಸಂಪರ್ಕಿಸಿದಂತೆ ಕಾಣುವುದಿಲ್ಲ. ರಮ್ಯ ಈ ಚಿತ್ರದಲ್ಲಿ ಅಭಿನಯಿಸದಿದ್ದರೆ ನಾಲ್ಕು ಕೋಟಿ ರೂಪಾಯಿಗಳು ನಿರ್ಮಾಪಕರಿಗೆ ನಷ್ಟ ಆಗುವುದು ಎಂದು ಹೇಳಿದ್ದಾರೆ. ಅದನ್ನು ಅವರು ಕಟ್ಟಿ ಕೊಡಬೇಕು ಎಂದಿದ್ದಾರೆ.
ಆದರೆ ರಮ್ಯ ತಮ್ಮ ಹೇಳಿಕೆಯೆಲ್ಲಿ ಜಗ್ಗೇಶ್ ಅವರು ರಾಜಕೀಯ ದ್ವೇಷದಿಂದ ಹೀಗೆ ಹೇಳುತ್ತಿದ್ದಾರೆ ಎಂದುಬಿಟ್ಟಿದ್ದಾರೆ. ಲೇಟೆಸ್ಟ್ ಏನಪ್ಪಾ ಅಂದರೆ ಕನ್ನಡ ಸಿನೆಮಾ ನಿರ್ಮಾಪಕನ ಪರವಾಗಿ ರಮ್ಯ ಯೋಚಿಸಬೇಕಿತ್ತು ಅಂದವರಿಗೂ ಸಹ ಅವರು ನಿನ್ನೆ ಅವರ ಕ್ಷೇತ್ರ ಮಂಡ್ಯದಲ್ಲಿ ಮಾತನಾಡುತ್ತಾ ನಾನು ನೀರ್ ದೋಸೆ ಚಿತ್ರದಲ್ಲಿ ಅಭಿನಯಿಸುವುದಿಲ್ಲ ಎಂದು ಹೇಳೇ ಎಲ್ಲ ಎಂದು ದೋಸೆಯನ್ನು ಖಾವಲಿಯಿಂದ ತಿರುಗಿ ಹಾಕಿದ ಹಾಗೆ ಹೇಳಿದ್ದಾರೆ.
ಚುನಾವಣೆ ಮುಗಿದ ತಕ್ಷಣ ನಾನು ಒಂದೂವರೆ ತಿಂಗಳು ಫ್ರೀ ಇದ್ದೇ. ಆಗ ನನ್ನ ಉಳಿದ ಭಾಗದ ಚಿತ್ರೀಕರಣ ಪೂರೈಸಿಕೊಳ್ಳಿ ಎಂದು ನಿರ್ದೇಶಕ ವಿಜಯಪ್ರಸಾದ್ ಅವರಿಗೆ ಹೇಳಿದ್ದೆ.
Follow us on Google News and stay updated with the latest!
Comments
- logoutLogout
-
Contact at support@indiaglitz.com