ದರ್ಶನ್ ಪೇರಿಸಿದ ರೆಕಾರ್ಡ್
Send us your feedback to audioarticles@vaarta.com
ಇಂದು ತೂಗುದೀಪ ಶ್ರೀನಿವಾಸ್ ಕುಡಿ ದರ್ಶನ್ ಸುಲ್ತಾನ್ ಆಫ್ ಬಾಕ್ಸ್ ಆಫೀಸು ಎಂದೇ ಹೇಳಲಾಗುವ ನಟ ಮತ್ತೊಂದು ಹೆಗ್ಗಳಕಿಗೆ ಅರ್ಹರಾಗುತ್ತಿದ್ದಾರೆ.
ಇದೆ ಗುರುವಾರ ಬಿಡುಗಡೆ ಅಗಲಿರುವ ದರ್ಶನ್ ಅವರ ಬೃಂದಾವನ ಕ್ಕೂಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಅದೇ ಅಲ್ಲದೆ ಪೈಪೋಟಿಯಲ್ಲಿ ಚಿತ್ರಮಂದಿರಗಳು ಚಿತ್ರಕ್ಕೆ ಮುಗಿಬಿದ್ದಿದೆ.
ಮುಂಬಯಿಯಲ್ಲಿ ಸಿ ಜೆ ಅಳವಡಿಕೆಗಾಗಿ ಚಿತ್ರವನ್ನೂ ತೆಗೆದುಕೊಂಡು ಹೋದಾಗ ಕೆಲವು ರೀಲ್ ಗಳನ್ನು ಹಿಂದಿಯ ಪ್ರಖ್ಯಾತ ನಟ ಅಕ್ಷಯ್ ಕುಮಾರ್ ಅವರು ನೋಡಿ ಚಿತ್ರದ ಕ್ವಾಲಿಟಿ ಬಗ್ಗೆ ಆಶ್ಚರ್ಯವನ್ನು ವ್ಯಕ್ತ ಪಡಿಸಿದ್ದಾರೆ.
ತೆಲುಗಿನ ಜೂನಿಯರ್ ಎಂಟಿ ಆರ್ ಅವರ ಬೃಂದಾವನಮ್ಸಿನೆಮಾ ಅತ್ಯಂತ ಜಯಭೇರಿ ಹೊಡದದ್ದು ಗೊತ್ತಿದೆ. ಅಷ್ಟೇ ಮಟ್ಟದಲ್ಲಿ ಕನ್ನಡ ಅವತರಿಣಿಕೆ ಸಹ ಗಲ್ಲ ಪೆಟ್ಟಿಗೆ ತುಂಬುವುದರಲ್ಲಿ ಸಂದೇಹವೆ ಇಲ್ಲ ಎಂದು ಈಗಾಗ್ಲೆ ನಿರೂಪಿಸಿದೆ. 15 ರಿಂದ 20 ಕೋಟಿ ವೆಚ್ಚ ಆಗಿರುವುದಾಗಿ ದರ್ಶನ್ ಅವರ ಬೃಂದಾವನ ಚಿತ್ರಕ್ಕೆ ಅಂದಾಜು ಮಾಡಲಾಗುತ್ತಿದೆ. ಈಗಾಗಲೇ ಟಿ ವಿ ರೈಟ್ಸ್ 5 ಕೋಟಿ ಹಾಗೂ 47 ಲಕ್ಷ ರೂಪಾಯಿಗಳಿಗೆ ಬೃಂದಾವನ ಮಾರಟವಾಗಿದೆ.
ಈಪಾಟಿ ಮಾರುಕಟ್ಟೆಯ ಸದ್ದು ಬೃಂದಾವನ ಚಿತ್ರಕ್ಕೆ ಆಗುತ್ತಿರುವುದಕ್ಕೆ ಕಾರಣ ದರ್ಶನ್ ಅವರ ಈ ಹಿಂದಿನ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಹಾಗೂ ಬುಲ್ ಬುಲ್ ಮಾರುಕಟ್ಟೆಯಲ್ಲಿ ಕೊಳ್ಳೆ ಹೊಡದದ್ದೇ ಕಾರಣ. ಕ್ರಾಂತಿ ವೀರ.....365 ದಿವಸಗಳ ಹತ್ತಿರಕ್ಕೆ ಬರುತ್ತಿದೆ. ಬುಲ್ ಬುಲ್ ದಿವಸ ಪ್ರದರ್ಶನಗೊಂಡು ಅಚ್ಚರಿ ಮೂಡಿಸಿದೆ.
ದರ್ಶನ್ ಅಂದರೆ ಸಕ್ಸೆಸ್ ದರ್ಶನ ಗ್ಯಾರಂಟಿ ಅನ್ನುವಷ್ಟರ ಮಟ್ಟಿಗೆ ಅವರ ವೃತ್ತಿ ತಲುಪಿದೆ.
Follow us on Google News and stay updated with the latest!
Comments
- logoutLogout
-
Contact at support@indiaglitz.com