ಶಂಭೋ ಮಹಾದೇವ ಯು
Send us your feedback to audioarticles@vaarta.com
ಬೆಂಗಳೂರಿನ ಪ್ರಾದೇಶಿಕ ಸೆನ್ಸಾರ್ ಮಂಡಳಿ ಶಂಭೋ ಮಹಾದೇವ ಸಿನಿಮಾವನ್ನು ವೀಕ್ಷಿಸಿ ಯು ಅರ್ಹತಾ ಪತ್ರವನ್ನು ನೀಡಿ ಚಿತ್ರ ತಂಡಕ್ಕೆ ಹರುಷವನ್ನು ಉಂಟುಮಾಡಿದೆ.ಇತ್ತೀಚಿನ ದಿನಗಳಲ್ಲಿ ಒಂದು ಲೋಪಕ್ಕು ಜಾಗ ಮಾಡಿಕೊಡದೆ ಕ್ಲೀನ್ ಚಿಟ್ ಸೆನ್ಸಾರ್ ಮಂಡಳಿ ಪಡೆದಿರುವ ಚಿತ್ರ ಶಂಭೋ ಮಹಾದೇವ.
ಶಂಭೋ ಮಹಾದೇವ ಮಾತುಗಳ ಜೋಡಣೆ ಕೆಲಸ ರಾಜೇಶ್ ರಾಮನಾಥ್ ಅವರ ಸ್ಥಾಯಿ ಡಿಜಿಟಲ್ ಸ್ಟುಡಿಯೋ ಅಲ್ಲಿ ಸಂಪೂರ್ಣ ಗೊಳಿಸಿದೆ.ಸಂಜನಾ ಮೂವೀಸ್ ಅಡಿಯಲ್ಲಿ ಮೈಸೂರಿನವರಾದ ಕುಮಾರ್ ನಿರ್ಮಾಪಕರು ಹಾಗೂ ಮೈಸೂರು ಮಂಜು ನಿರ್ದೇಶನದ ಶಂಭೋ ಮಹಾದೇವ ಚಿತ್ರೀಕರಣ ಬೆಂಗಳೂರು ಬನ್ನೇರುಘಟ್ಟ,ಮೈಸೂರು,ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾಡಲಾಗಿದೆ.
ಹಣದ ವಿಚಾರದಲ್ಲಿ ಸಂಬಂದಗಳು ದಿಕ್ಕಾಪಾಲಾಗಿ ಬಿಡುವುದು ಎಂಬ ವಿಚಾರದ ಜೊತೆಗೆ ನಿರ್ಮಾಣ ಮಾಡಿರುವ ಈ ಚಿತ್ರ ಸುದರ್ಶನ್ ಹಾಗೂ ಆಕಾಶ್ ತಾತ ಮೊಮ್ಮೊಗನ ಸುತ್ತ ತಿರುಗುವುದು. ನೇಹ ಪಾಟೀಲ್ ನಾಯಕಿ ಆಗಿರುವ ಈ ಚಿತ್ರದಲ್ಲಿ ಅಪೂರ್ವ ಶ್ರೀ,ಶೋಬಾರಾಜ್,ಗಿರಿಜ ಲೋಕೇಶ್,ಬಿರಾದರ್,ಲಯ ಕೋಕಿಲ,ಸತ್ಯಜಿತ್,ವಠಾರ ಮಹೇಶ್,ಭಾಸ್ಕರ್,ನಾಗೇಂದ್ರ ಅರಸ್,ಡಿ ಟಿ ಎಸ್ ರಾಮಚಂದ್ರ,ರಾಮಕೃಷ್ಣ ನೊಣವಿನಕೆರೆ,ಗಣೇಶ್ ರಾವ್ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.
ಗಣೇಶ್ ಭಟ್ ಸಂಗೀತ ನೀಡಿದ್ದಾರೆ.ನಾಗೇಂದ್ರ ಅರಸ್ ಅವರ ಸಂಕಲನ ಅಲ್ಲದೆ ಅವರು ಖಳ ನಟನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪವನ್ ಕುಮಾರ್ ಈ ಚಿತ್ರದ ಛಾಯಾಗ್ರಾಹಕರು. ಹರೀಶ್ ಬೆಕ್ಕಳಲೆ ಈ ಚಿತ್ರದ ಸಹಾಯಕ ನಿರ್ದೇಶಕರು.
Follow us on Google News and stay updated with the latest!
Comments
- logoutLogout
-
Contact at support@indiaglitz.com