ಡಿ ಕೆ ಕಲಾ ಮೇಳ ನಾಯಕನ ಎಂಟ್ರಿ ಹಾಡು
Send us your feedback to audioarticles@vaarta.com
ಪ್ರೇಮ್ ಡ್ರೀಮ್ಸ್ ರಕ್ಷಿತಾ ಪ್ರೇಮ್ ಹಾಗೂ ಗ್ಲೆನ್ ಡೈಸ್ ಅವರ ಡಿ ಕೆ ಸಿನೆಮಕ್ಕೆ ಒಂದು ಭರ್ಜರಿ ಹಾಡೊಂದನ್ನು ಕನಕಪುರದಲ್ಲಿ ಕಲಾ ಮೇಳ ಸೆಟ್ ಅಲ್ಲಿ ಐದು ದಿವಸಗಳ ಚಿತ್ರೀಕರಣ ಮಾಡಲಾಗಿದೆ. ಅದು ಡಿ ಕೆ ಸಾಮ್ರಾಜ್ಯದ ದಿವಸ. ಕನಕಪುರದ ಗ್ರಾಮವೊಂದರಲ್ಲಿ ಚಿತ್ರೀಕರಣ. ಡಿ ಕೆ ಪಕ್ಷದ 2000 ಬಾವುಟಗಳ ಮಿಂಚು,400 ನೃತ್ಯಗಾರರ ಸಂಚಲನ,ಹಬ್ಬದ ವಾತಾವರಣದಲ್ಲಿ ಕಣ್ಣು ಕೋರೈಸುವ ಮೆರಗು,ಅಲ್ಲಿಗೆ ಬರುವ ನಾಯಕ,ಮುಗಿಲು ಮುಟ್ಟುವ ಚಪ್ಪಲೆ,ಶಿಳ್ಳೆ,ಅದರ ಜೊತೆಗೆ ಜೂನಿಯರ್ ಪ್ರೇಮ್ ಸೂರ್ಯನ ಖುಷಿ ಕೊಡುವ ಸ್ಟೆಪ್ಸ್.....ಐದು ದಿವಸಗಳ ಈ ಹಾಡಿಗೆ ಲಕ್ಷಾಂತರ ಹಣ ಖರ್ಚು ಮಾಡಲಾಗಿದೆ ಈ ಬಂದ ಬಂದ ಡಿ ಕೆ ಬಂದ.....ಹಾಡಿಗೆ.
ಇದು ನಾಯಕ ಪ್ರೇಮ್ ಅವರ ಪರಿಚಯದ ಹಾಡು ಸಿನಿಮಾದಲ್ಲಿ. ಇದೆ ಪರಿಚಯದ ಹಾಡಿನಲ್ಲಿ ಮಾಸ್ಟೆರ್ ಸೂರ್ಯ ಪ್ರೇಮ್ ಸಹ ಪ್ರಥಮ ಬಾರಿಗೆ ಹೆಜ್ಜೆ ಹಾಕಿದ್ದಾನೆ. ಅಪ್ಪನಿಗೆ ತಕ್ಕಂತೆ ಹೋಲುವ ವೇಷ ಭೂಷಣ ತೊಟ್ಟು ವಿಜೃಂಬಿಸಿದ್ದಾನೆ ಮಾಸ್ಟೆರ್ ಸೂರ್ಯ. ಅಪ್ಪನ ಬೂಟಿನ ಹಾಗೂ ಅವನ ಬೂಟಿನ ಹೋಲಿಕೆ ಸರಿ ಇಲ್ಲ ಎಂದು ಈ ಚಿಕ್ಕ ವಯಸ್ಸಿನಲ್ಲೇ ಮಾಸ್ಟೆರ್ ಸೂರ್ಯ ಹಟ ಮಾಡಿದ್ದು ಚಿತ್ರದ ಒಳ್ಳೆಯದಕ್ಕೆ. ಅದಕ್ಕಾಗಿ ಕೆಲವು ತಾಸುಗಳ ಚಿತ್ರೀಕರಣ ಸಹ ಸ್ಥಬ್ದ ಆಗಿದ್ದನ್ನು ಸ್ಮರಿಸುತ್ತಾರೆ ನಿರ್ದೇಶಕ ವಿಜಯ ಹಂಪಳಿ.
ಡಿ ಕೆ ಚಿತ್ರದ ಮುಹೂರ್ತದ ದಿನ ಕಪಾಲಿ ಚಿತ್ರಮಂದಿರದಲ್ಲಿ ಟ್ರೈಲರ್ ಸಹ ಬಿಡುಗಡೆ ಆಗಿದೆ. ಈ ಚಿತ್ರದಿಂದ ಉದಯ ಪ್ರಕಾಷ್ ಅವರು ವಿಜಯ್ ಹಂಪಲಿ ಎಂದು ನಾಮಕರಣ ಮಾಡಿಕೊಂಡಿದ್ದಾರೆ. ಚಿತ್ರಕ್ಕೆ ಅವರದೇ ಕಥೆ,ಚಿತ್ರಕ್ತೆ ಹಾಗೂ ಸಂಭಾಷಣೆ ಸಹ ಒದಗಿಸಿದ್ದಾರೆ.
ಅರ್ಜುನ್ ಜನ್ಯ ಅವರು ಐದು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ.ತುಮಕೂರು ಜಿಲ್ಲೆಯ ಸುದರ್ಶನ್ ಅವರು ಅವರು ಮೂರು ಹಾಡುಗಳನ್ನು ರಿಚಿಸಿದ್ದಾರೆ.ಆನಂದ್,ಮಾಸ್ ಮಾಧ,ಶ್ರೀ ನಿವಾಸ್ ಪಿ ಬಾಬು,ನಾಗೇಶ್,ಪ್ರń
Follow us on Google News and stay updated with the latest!
Comments
- logoutLogout
-
Contact at support@indiaglitz.com