ಗಾಂಧಿ ಜಯಂತಿಗೆ ಸಿಂಹಾದ್ರಿ
Send us your feedback to audioarticles@vaarta.com
ಕೆಲವು ದಿವಸಗಳ ಹಿಂದೆ ತುಂಬು ತುಳಿಕಿದ ಧ್ವನಿ ಸುರುಳಿ ಸಮಾರಂಭ ಆಚರಿಸಿಕೊಂಡು,ಹಾಡುಗಳು ಮತ್ತು ಚಿತ್ರ ಟ್ರೈಲರ್ ಅನ್ನು ಪ್ರದಶನ ವ್ಯವಸ್ಥೆ ಮಾಡಿದ ಕನ್ನಡ ಚಿತ್ರ ರಂಗದ ಸಕ್ಸಸ್ ನಿರ್ಮಾಪಕ ಆರ್ ಎಸ್ ಗೌಡ ಅವರು ಇದೀಗ ಯು/ಎ ಅರ್ಹತಾ ಪತ್ರವನ್ನು ಪಡೆದು ಚಿತ್ರವನ್ನೂ ಅಕ್ಟೋಬರ್ 2,ಗಾಂಧಿ ಜಯಂತಿ ಅಂದು ಬಿಡುಗಡೆ ಮಾಡಲು ತೀರ್ಮಾನಿಸಿದ್ದಾರೆ.
ಬಹು ನಿರೀಕ್ಷಿತ ಚಿತ್ರ ಖ್ಯಾತ ನಿರ್ದೇಶಕ ಶಿವಮಣಿ ಅವರ ನಿರ್ದೇಶನದ ಸಿಂಹಾದ್ರಿ ಸಾಹಸ ಚಿತ್ರಗಳ ಸರದಾರ ವಿಜಯ್,ಸೌಂದರ್ಯ ಹಾಗೂ ಐಶ್ವರ್ಯ ಅಭಿನಯದ ಚಿತ್ರವೂ ಅಣ್ಣ ತಂಗಿಯ ಸಂಭದದ ಜೊತೆಗೆ ಹಲವು ತಿರುವುಗಳನ್ನು ಇಟ್ಟುಕೊಂಡಿದೆ.
ತವರಿಗೆ ಬಾ ತಂಗಿ ಇಂದ ಸೂಪರ್ ಹಿಟ್ ನಿರ್ಮಾಪಕ ಆದ ಆರ್ ಎಸ್ ಗೌಡ ಅವರು ಮೆಗಾ ಹಿಟ್ ಬ್ಯಾನರ್ ಅಡಿಯಲ್ಲಿ ಸಿಂಹಾದ್ರಿ ಚಿತ್ರ ನಿರ್ಮಾಣ ಮಾಡಿದ್ದಾರೆ.
ಸಾಹಸ ಸಿನೆಮಾಗಳ ನಿರ್ದೇಶಕರೆಂದೇ ಮೆಚ್ಚುಗೆ ಗಳಿಸಿರುವ ಶಿವಮಣಿ ಅವರು ಜೋಶ್ ನಂತರ ಮತ್ತೆ ನಿರ್ದೇಶನ ಮಾಡಿರುವ ಚಿತ್ರ ಸಿಂಹಾದ್ರಿ. ಸಾಹಸಮಯ ಸನ್ನಿವೇಶಗಳು,ಪ್ರೀತಿ,ಕಾಮಿಡಿ,ಮನಮಿಡಿಯುವ ದೃಶ್ಯಗಳು ಈ ಸಿಂಹಾದ್ರಿ ಚಿತ್ರದ ಜೀವಾಳ ಎನ್ನುತ್ತಾರೆ ಶಿವಮಣಿ ಅವರು.
ಅರ್ಜುನ್ ಜನ್ಯ ಅವರ ಸಂಗೀತ,ಆರ್ ಗಿರಿ ಅವರ ಛಾಯಾಗ್ರಹಣ,ಅಭಿಶೇಖ್ ಅವರ ಚಿತ್ರಕಥೆ,ನಟ,ನಿರ್ದೇಶಕ,ಬರಹಗಾರ ಮೋಹನ್ ಅವರ ಸಂಭಾಷಣೆ,ಮಾಸ್ ಮಾಧ ಅವರ ಸಾಹಸ ಈ ಚಿತ್ರಕ್ಕೆ ಒದಗಿಸಿದ್ದಾರೆ.
ತಾರಾಗಣದಲ್ಲಿ ವಿಜಯ್,ಸೌಂದರ್ಯ,ಐಶ್ವರ್ಯ,ಪದ್ಮ ವಾಸಂತಿ,ಸುಚಿಂದ್ರಪ್ರಸಾದ್,ರಮೇಶ್ ಭಟ್,ಕೋಟೆ ಪ್ರಭಾಕರ್,ಮುನಿ,ಮಳವಳ್ಳಿ ಸಾಯಿ ಕೃಷ್ಣ ಹಾಗೂಇನ್ನಿತರರು ಪಾತ್ರವರ್ಗದಲ್ಲಿ ಇದ್ದಾರೆ.
Follow us on Google News and stay updated with the latest!
Comments
- logoutLogout