ಸ್ನೇಕ್ನಾಗನ ಸಂಚಾರ
Send us your feedback to audioarticles@vaarta.com
ಬೆಂಗಳೂರಿನಲ್ಲಿ ಕೇವಲ ವಾಹನಗಳ ಸಂಚಾರ ದೊಡ್ಡ ಮಟ್ಟದಲ್ಲಿ ಆಗುತ್ತದೆ ಅಂದುಕೊಂಡಿದ್ದೀರಾ. ಈಗ ಹಾವುಗಳ ಸಂಚಾರ ಅಂದರೆ ಘಾಬರಿ ಪಡಬೇಡಿ. ಬೆಂಗಳೂರಿನಲ್ಲಿ ಸ್ನೇಕ್ ನಾಗ ಚಿತ್ರೀಕರಣ ಪ್ರಾರಂಬವಾಗಿದೆ ಅಷ್ಟೇ!
ಬೆಂಗಳೂರಿನ ಹೊರಾಂಗಣದಲ್ಲಿ ಹಾವುಗಳು ಸಿಗುವುದು ಉಂಟು. ಆದರೆ ಈ ಕಾಂಕ್ರೀಟ್ ಕಟ್ಟಡಗಳಲ್ಲಿ ಹಾವು ಎಲ್ಲಿ ಬರಬೇಕು ಸ್ವಾಮೀ. ಅದಕ್ಕೆ ಪ್ರತಿಭಾ ನಂದಕುಮಾರ್ ಅವರು ಹಾವಾಡಿಗ ಕಾದಂಬರಿ ಇಂದ ಸ್ನೇಕ್ ನಾಗ ಮೂಲಕ ಹಾವು ಬಿಡುವ ಕೆಲಸ ಮಾಡುತ್ತಿದ್ದಾರೆ. ಬರಹಗಾರ್ತಿ, ಪತ್ರಕರ್ತೆ, ಸಂಸ್ಕೃತಿಕ ಜೀವನಕ್ಕೆ ಬಹಳ ಹತ್ತಿರವಾದ ವ್ಯಕ್ತಿ ಪ್ರತಿಭಾ ಅವರ ಪ್ರತಿಭೆ ಈಗ ಸಿದ್ದವಾಗುತ್ತಿದೆ.
ಮಾಧವ ಮೂವೀಸ್ ಲಾಂಛನದಲ್ಲಿ ಗೋಪಾಲ ಕುಷ್ಠಗಿ ಅವರು ನಿರ್ಮಿಸುತ್ತಿರುವ ಸ್ನೇಕ್ ನಾಗ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.
ಯೋಗೇಶ್ ಈ ಚಿತ್ರದ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಹಿತಾಚಂದ್ರಶೇಖರ್, ಗಿರೀಶ್ ಕಾರ್ನಾಡ್, ಸಿಹಿಕಹಿ ಚಂದ್ರು, ಕರಿಸುಬ್ಬು, ಕ್ರಿಶ್, ಅಪೇಕ್ಷ, ಪಾಯಲ್ ಗುಪ್ತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಮೈಸೂರಿನ ಸ್ನೇಕ್ ಶ್ಯಾಂ ನಾಯಕ ಯೋಗೇಶ್ ಅವರಿಗೆ ಹಾವು ಹಿಡಿಯುವುದರ ಬಗ್ಗೆ ತರಭೇತಿ ನೀಡುತ್ತಿದ್ದಾರೆ.
ಉಮಾರಾವ್ ಅವರು ಬರೆದಿರುವ ಕಥೆಗೆ ಪ್ರತಿಭಾನಂದಕುಮಾರ್ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಂಭಾಷಣೆಯನ್ನು ಪ್ರತಿಭಾ ಅವರೇ ಬರೆದಿದ್ದಾರೆ. ವೀರಸಮರ್ಥ್ ಸಂಗೀತ ನಿರ್ದೇಶನ, ಸುರೇಶ್ ಸಂಕಲನ, ಅದ್ವೈತ ಛಾಯಾಗ್ರಹಣ ವಸಂತ ಕುಲಕರ್ಣಿ ಕಲಾ ನಿರ್ದೇಶನ, ಎನ್.ಕೆ.ಲೀನ್ ಸಾಹಸ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್, ಗೋಪಾಲ ವಾಜಪೇಯಿ ಹಾಗೂ ಪ್ರತಿಭಾನಂದಕುಮಾರ್ ಬರೆದಿದ್ದಾರೆ.
Follow us on Google News and stay updated with the latest!
Comments
- logoutLogout
-
Contact at support@indiaglitz.com