ಕಿಚ್ಚ ಮೆಚ್ಚಿದ ಜೈ ಲಲಿತ
Send us your feedback to audioarticles@vaarta.com
ಜನಪ್ರಿಯ ನಟ, ನಿರ್ದೇಶಕ ಕಿಚ್ಚ ಸುದೀಪ್ ಅವರು ಇತ್ತೀಚಿಗೆ ಜೈ ಲಲಿತ` ಕನ್ನಡ ಚಿತ್ರವನ್ನೂ ವೀಕ್ಷಿಸಿ ಅಪಾರವಾಗಿ ಪ್ರಶಂಸೆ ಮಾಡಿದ್ದಾರೆ.
ಕಿಚ್ಚ ಸುದೀಪ್ ನಗರದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ವೀಕ್ಷಿಸಿ ತಂಡದ ಶ್ರಮಕ್ಕೆ ಪ್ರಶಂಸೆಯನ್ನು ನೀಡಿದರು. ಅದರಲ್ಲೂ ಶರಣ್ ರವರ ಪಾತ್ರವನ್ನಂತು ಬಹಳ ಇಷ್ಟಪಟ್ಟು ಕೊಂಡಾಡಿದರು.
“ನಮಗೆ ಹಣೆಗೆ ಒಂದು ಬೊಟ್ಟು ಇಟ್ಟು ಹುಡುಗಿಯ ಹಾಗೆ ಅಭಿನಯಿಸು ಅಂದರೆ ಕಷ್ಟ ಆಗುತ್ತೆ. ಆ ಬಿಹೇವಿಯರ್ ನಮಗೆ ಬರಲ್ಲ ಸಾವಿರಾರು ಜನ ಶೂಟಿಂಗ್ ಟೈಮ್ ನಲ್ಲಿ ನೋಡ್ತಿರ‍್ತಾರೆ ಮುಜುಗರ ಆಗುತ್ತೆ”.
ಒಬ್ಬ ನಟ ಸ್ವಲ್ಪ ಹೆಸರು ಮಾಡಿ ನಾಯಕನಾಗಿ ಕಾಣಿಸ್ಕೊಂಡಮೇಲೆ ಕಮರ್ಷಿಯಲ್ ಆಗಿ ಹೋಗೋಣ ಅಂತ ಯೋಚನೆ ಮಾಡೋ ಅಂತ ಸಂದರ್ಭದಲ್ಲಿ ಇಂತ ಪಾತ್ರ ಮಾಡಬೇಕಾದ್ರೆ ಗುಂಡಿಗೆ ಇರಬೇಕು. ಶರಣ್ ಅವರ ಅಭಿನಯ ಮ್ಯಾನರಿಸಂ ನಿಜಕ್ಕೂ ಮೆಚ್ಚುತ್ತೀನಿ ನಾನು. ಒಂದು ಹೆಣ್ಣಿನ ವೇಶ ಹಾಕ್ಕೊಂಡು ಎಲ್ಲೂ ತನ್ನ ಗಂಡಿನ ರೂಪ ಕಾಣದ ಹಾಗೆ ನಿಜಕ್ಕೂ ತುಂಬಾ ಚನ್ನಾಗಿ ಕಾಣಿಸ್ಕೊಂಡಿದ್ದಾರೆ ಅದನ್ನ ತುಂಬಾ ಸರಳವಾಗಿ ನಿಬಾಯಿಸಿದ್ದಾರೆ. ಹಾಗೆ ಮೇಕಪ್ ಮಾಡಿರುವ ಮಲ್ಲಿಕಾರ್ಜುನ್ ತುಂಬಾ ಚನ್ನಾಗಿ ಕೆಲಸ ಮಾಡಿದ್ದಾರೆ. ಶರಣ್ ಅವರ ಶ್ರಮ ಚನ್ನಾಗಿ ಎದ್ದು ಕಾಣುತ್ತೆ ಸಿನೆಮಾದಲ್ಲಿ ಎಂದು ಅಭಿಪ್ರಾಯ ಪಟ್ಟರು.
ಅವರ ಜೊತೆ ಹಾಸ್ಯ ನಟರಾಗಿ ಹಲವಾರು ಚಿತ್ರಗಳಲ್ಲಿ ಮಾಡಿರುವುದನ್ನು ಸ್ಮರಿಸಿದ ಕಿಚ್ಚ ಸುದೀಪ್ ವೈವಿದ್ಯತೆಗಳಿಗೆ ಹಾತೊರೆಯುವ ಶರಣ್ ಅವರನ್ನು ಚಿತ್ರೀಕರಣ ಸಂಧರ್ಭದಲ್ಲಿ ಕಂಡಿದ್ದಾರಂತೆ. ಇದರಲ್ಲಿ ವಂಡರ್‌ಫುಲ್ ಜಾಬ್ ಮಾಡಿದ್ದಾರೆ. ಒಟ್ಟಾರೆ ಸಿನಿಮಾ ತುಂಬಾ ಚನ್ನಾಗಿ ಮಾಡಿದ್ದಾರೆ ಶರಣ್ ಮತ್ತು ಅವರ ತಂಡಕ್ಕೆ ಒಳ್ಳೆದಾಗಲಿ ಎಂದು ಕಿಚ್ಚ ಸುದೀಪ್ ಹಾರೈಸಿದರು.
Follow us on Google News and stay updated with the latest!
Comments
- logoutLogout
-
Contact at support@indiaglitz.com