ಹೆಂಡತಿ ಪ್ರಾಣ ಹಿಂಡುತಿ ಮುಹೂರ್ತ
Send us your feedback to audioarticles@vaarta.com
ಹೆಂಡತಿ ಪ್ರಾಣ ಹಿಂಡುತಿ...ಎಂಬುದು ಪ್ರಸಿದ್ದ ದಾಸರ ಪದ. ಅದರಲ್ಲಿ ಅನೇಕ ವಿಚಾರಗಳನ್ನು ಅಡಗಿಸಿಟ್ಟಿದ್ದಾರೆ ದಾಸರು. ಆನಂತರ ಹೆಂಡತಿಯೊಬ್ಬಳು ಮನೆಯೊಳಗಿದ್ದರೇ...ಹೆಂಡತಿ ಅಂದರೆ ಖಂಡಿತ ಅಲ್ಲ ದಿನವೂ ಕೊರೆಯುವ ಬೈರಿಗೆ... ಎಂದರು ಕವಿಗಳು. ಈಗ ಹೆಂಡತಿ ಪ್ರಾಣ ಹಿಂಡುತಿ ಎಂಬ ಶೀರ್ಷಿಕೆ ಒಂದಿಗೆ ಸಾಂಸಾರಿಕ ಚಿತ್ರವೊಂದು ಶುರು ಆಗಿದೆ. ಸಂಸಾರದಲ್ಲಿ ಪತಿ-ಪತ್ನಿಯರ ನಡುವೆ ಸಾಮರಸ್ಯವಿಲದೇ ಹೋದಾಗ, ಸಂಸಾರದಲ್ಲಿ ಒತ್ತಡ ಜಾಸ್ತಿಯಾದಾಗ ಏನೇನೆಲ್ಲಾ ಆಗಬಹುದು ಎಂಬ ಕಲ್ಪನೆಯೊಂದಿಗೆ ನಿರ್ದೇಶಕ ಎಸ್.ಎ.ಭಾರಾದ್ವಾಜ್ ಹಾಸ್ಯಭರಿತವಾಗಿ ನಿರೂಪಿಸ ಹೊರಟಿರುವ ಚಿತ್ರವೇ ಹೆಂಡತಿ ಪ್ರಾಣ ಹೆಂಡತಿ ಎಂಥವರನ್ನಾದರೂ ತಕ್ಷಣ ಆಕರ್ಷಿಸುವಂಥ ಶೀರ್ಷಿಕೆ ಇಟ್ಟುಕೊಂಡಿರುವ ನಿರ್ದೇಶಕರು ಕಳೆದ ವಾರ ವಿಜಯನಗರ ಮನೆಯೊಂದರಲ್ಲಿ ಈ ಚಿತ್ರದ ಮೂಹೂರ್ತ ಮಾಡಿ ಈಗಾಗಲೇ ೫ ದಿನಗಳ ಚಿತ್ರೀಕರಣವನ್ನು ಕೂಡ ಮುಗಿಸಿದ್ದಾರೆ. ನಾಯಕ ಭರತ್ಭೂಷಣ್ ತನ್ನ ಮಗನಿಗೆ ಶಾಲೆಗೆ ಸೇರಿಸಲು ಹಣವಿಲ್ಲದಿದ್ದಾಗ ತನ್ನ ತಂದೆಗೆ ಬರುವ ಪೆನ್ಷನ್ ಹಣ ಪಡೆದು ಸೇರಿಸುತ್ತಾನೆ. ಇದಲ್ಲದೆ ಅನೇಕ ಹಾಸ್ಯಮಯ ದೃಶ್ಯಗಳನ್ನು ಸಹ ಚಿತ್ರೀಕರಿಸಿಕೊಳ್ಳಲಾಯಿತು.
ಚಿತ್ರಕ್ಕೆ ಎಲ್.ಎನ್.ಗೂಚಿ ಸಂಗೀತ, ಜಾನ್ ಛಾಯಾಗ್ರಹಣ, ಭರತ್ಭೂಷರ್ಣ ಸಂಭಾಷಣೆ, ರೆಡ್ಡಿ ಸಂಕಲನ, ಎಂ.ಆರ್.ಎಸ್.ಅಯ್ಯಂಗಾರ್ ಸಾಹಿತ್ಯ ಮತ್ತು ಸಹ ನಿರ್ಮಾಪಕ, ಭಾರಧ್ವಾಜ್ ಕಥೆ, ಚಿತ್ರಕಥೆ ಕಪಿಲ್ ನೃತ್ಯನಿರ್ದೇಶನವಿದೆ. ಭರತ್ಭೂಷಣ್, ನಚಿಕೇತ್, ಹಂಶಿ, ಓಂಪ್ರಕಾಶ್, ಮನ್ದೀಪ್ರಾಯ್, ಕವಿತಾಶೆಟ್ಟಿ, ಎಂ.ಆರ್.ಎಸ್.ಅಯ್ಯಂಗಾರ್, ಶ್ರೀಚರಣ್, ಕುಂಬೇಶ್, ತೇಜಸ್ ಭೂಷಣ್ ತಾರಾಬಳಗದಲ್ಲಿದ್ದಾರೆ.
Follow us on Google News and stay updated with the latest!
Comments
- logoutLogout
-
Contact at support@indiaglitz.com