ಚಂದ್ರಲೇಖ 50
Send us your feedback to audioarticles@vaarta.com
ಅಂತೂ ಇಂತೂ ಚಂದ್ರಲೇಖ 50 ರ ಬೋರ್ಡ್ ಕಂಡಿದೆ. ಇದು ಚಿತ್ರ ತಂಡದ ಶ್ರಮ ಹಾಗೂ ಕನಸು ಕಂಡಿದ್ದು ನಿಜವಾಗಿದೆ. 50ರ ಗಡಿ ದಾಟಿ ಈಗ 75ಕ್ಕೆಚಂದ್ರಲೇಖ ಸಾಗುತ್ತಿದೆ.
ಹೆಸರಾಂತ ನಿರ್ದೇಶಕ ಎನ್ ಓಂಪ್ರಕಾಶ್ ರಾವ್ ಅವರ ನಿರ್ದೇಶನದ ಚಿರಂಜೀವಿ ಸರ್ಜಾ, ಶಾನ್ವಿ ಶ್ರೀವತ್ಸ, ಸಾಧು ಕೋಕಿಲ, ನಾಗಶೇಖರ್ ಅಭಿನಯದ ಫನ್, ಫಿಯರ್, ರೊಮಾನ್ಸ್ ಒಳಗೊಂಡ ಚಂದ್ರಲೇಖ 50 ದಿವಸಗಳನ್ನು ಯಶಸ್ವಿ ಆಗಿ ಪೂರೈಸಿ ಇದೀಗ 75 ದಿವಸಗಳಿಗೆ ಮುನ್ನುಗುತ್ತಿದೆ. ಕರ್ನಾಟಕದಾದ್ಯಂತ 35ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಂದ್ರಲೇಖ 75 ದಿವಸಗಳ ಪ್ರದರ್ಶನ ಕಾಣುವ ಭರವಸೆ ಎಸ್ ಎಂ ಪ್ರೊಡಕ್ಷನ್ ಬ್ಯಾನರ್ ನಿರ್ಮಾಪಕ ಕೆ ವಿ ಶ್ರೀಧರ್ ರೆಡ್ಡಿ ಅವರಿಗಿದೆ. ಎನ್ ಓಂ ಪ್ರಕಾಷ್ ರಾವ್ ಅವರು ನಿರ್ದೇಶನ ಮಾಡಿರುವ ಬಹುತೇಕ ನಾಲ್ಕು ಕಲಾವಿದರುಗಳೆ ಇರುವ ಚಂದ್ರಲೇಖ ಚಿತ್ರದ ಬಹು ಭಾಗ ರಾತ್ರಿ ಎಫ್ಫೆಕ್ಟ್ ಅಲ್ಲಿ ಒಂದೇ ಮನೆಯಲ್ಲಿ ಚಿತ್ರೀಕರಣವಾಗಿದೆ. ಜೆ ಬಿ ಈ ಚಿತ್ರದ ಸಂಗೀತ ನಿರ್ದೇಶಕರು.ಬಿ ರವಿಕುಮಾರ್ ಛಾಯಾಗ್ರಾಹಕರು, ಲಕ್ಷ್ಮಣ್ ರೆಡ್ಡಿ ಸಂಕಲನ, ಎಂ ಎಸ್ ರಮೇಶ್ ಅವರ ಸಂಭಾಷಣೆ, ರವಿ ವರ್ಮ ಅವರ ಸಾಹಸ ಈ ಚಂದ್ರಲೇಖ ಚಿತ್ರಕ್ಕೆ ಒದಗಿಸಿದ್ದಾರೆ.
Follow us on Google News and stay updated with the latest!
Comments
- logoutLogout
-
Contact at support@indiaglitz.com