ಪುಟ್ಟಯ್ಯಜ್ಜ ಧ್ವನಿ ಸುರುಳಿ ಬಿಡುಗಡ&
Send us your feedback to audioarticles@vaarta.com
ಗದುಗಿನ ವೀರೇಶ್ವರ ಪುಣ್ಯಾಶ್ರಮ ಗಾನಕೋಗಿಲೆ ಶ್ರೀ.ಪುಟ್ಟರಾಜ ಗವಾಯಿಗಳು ಬೆಳೆಸಿದ ಈ ವಿದ್ಯಾ ಸಂಸ್ಥೆಯಲ್ಲಿ ಸಾವಿರಾರು ಮಕ್ಕಳು ವಿದ್ಯೆ ಕಲಿಯುತ್ತಿದ್ದಾರೆ. ಕೇವಲ ೫ ತಿಂಗಳ ಮಗುವಿದ್ದಾಗಲೇ ತನ್ನ ಕಣ್ಣುಗಳನ್ನು ಕಳೆದುಕೊಂಡು ಅಂಧರಾಗಿದ್ದ ಪುಟ್ಟಯ್ಯಜ್ಜರ ಈ ಸಂಸ್ಥೆಯಲ್ಲಿ ಕಲಿತ ನೂರಾರು ಪ್ರತಿಭೆಗಳು ದೇಶದುದ್ದಗಲಕ್ಕೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಂಥ ಮಹಾಪುರುಷರ ಜೀವನಕಥೆ ಈಗ ಬೆಳ್ಳಿ ತೆರೆಯ ಮೇಲೆ ಮೂಡಿಬರುತ್ತಿರುವುದು ಎಲ್ಲಿರಿಗೂ ಗೊತ್ತಿರುವ ವಿಷಯ. ಹಿರಿಯ ನಟ ಉದಯ್ಕುಮಾರ್ ಅವರ ಮೊಮ್ಮಗಳಾದ ಹಂಸ ವಿಜೇತ ನಿರ್ದೇಶನದಲ್ಲಿ ತಯಾರಾಗಿರುವ ಶಿವಯೋಗಿ ಪುಟ್ಟಯ್ಯಜ್ಜ ಹೆಸರಿನ ಈ ಚಿತ್ರದಲ್ಲಿ ನಟ ವಿಜಯರಾಘವೇಂದ್ರ ಪುಟ್ಟರಾಜರಾಗಿ ಅಭಿನಯಿಸಿದ್ದಾರೆ. ದಶಕಗಳ ಹಿಂದೆ ತೆರೆಕಂಡ ಪಂಚಾಕ್ಷರಿ ಗವಾಯಿಗಳು ಚಿತ್ರದಲ್ಲಿಯೂ ಅಭಿನಯಿಸಿದ್ದರು.
ಅಮರ ಪ್ರಿಯರ ಸಂಗೀತ ಸಂಯೋಜನೆಯಲ್ಲಿರುವ ಈ ಚಿತ್ರದ ಆರು ಸುಮಧುರ ಗೀತೆಗಳುಳ್ಳ ಧ್ವನಿಸುರುಳಿ ಇತ್ತೀಚೆಗೆ ಆನಂದ್ ಆಡಿಯೋ ಸಂಸ್ಥೆ ಮೂಲಕ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ೩ ಹಾಡುಗಳಿಗೆ ಪುಟ್ಟಯ್ಯಜ್ಜರ ಸಾಹಿತ್ಯ, ಒಂದು ಹಾಡಿಗೆ ಶಿಶುನಾಳ ಶರೀಫರ ಸಾಹಿತ್ಯ ಬಳಸಿಕೊಳ್ಳಲಾಗಿದ್ದು ಸಂಗೀತ ನಿರ್ದೇಶಕ ಅಮರ ಪ್ರಿಯ ಅವರು ೩ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ.
೨೦೧೪ ಅವರ ಜನ್ಮ ಶತಮಾನೋತ್ಸವ ವರ್ಷ ಇದರ ಸವಿನೆನಪಿಗಾಗಿ ಗವಾಯಿಗಳ ಸಾಧನೆ, ಸೇವೆ ಹಾಗೂ ಜೀವನ ಚರಿತ್ರೆಯನ್ನು ಬೆಳ್ಳಿ ತೆರೆಯ ಮೇಲೆ ತರಬೇಕೆಂಬ ಉದ್ದೇಶದಿಂದ ನಿರ್ಮಾಪಕರಾದ ಶ್ಯಾಮ್ ಮುಕುಂದ ನವಲೆ ಈ ಚಿತ್ರದ ನಿರ್ಮಾಪಕರು. ಗಾನಯೋಗಿ ಪಂಚಾಕ್ಷರ ಗವಾಯಿಗಳ ಪರಮ ಶಿಷ್ಯರಾದ ಪುಟ್ಟಯ್ಯಜ್ಜರು ಉತ್ತಮ ಕವಿ ಹಾಗೂ ಹಾಡುಗಾರರಾಗಿದ್ದರಲ್ಲದೆ ಸಾರಂಗಿ, ಹಾರ್ಮೋನಿಯಂ, ಪಿಟೀಲು ಹಾಗೂ ತಬಲಾದಲ್ಲಿ ಪರಿಣತಿ ಹೊಂದಿದ್ದಾರೆ. ಮೇ ಅಂತ್
Follow us on Google News and stay updated with the latest!
Comments
- logoutLogout