ಮಹಾಕಾಳಿ ಭರ್ಜರಿ ಕ್ಲೈಮ್ಯಾಕ್ಸ್
Send us your feedback to audioarticles@vaarta.com
ಮಾಲಾಶ್ರೀ ಸಿನೆಮಗಳು ಅಂದರೆ ಅದಕ್ಕೆ ಏನೋ ಗತ್ತು ಹಾಗೂ ಗೈರತ್ತು. ಅದರಲ್ಲೂ ಚಿತ್ರದ ಶೀರ್ಷಿಕೆ ಮಹಾಕಾಳಿ ಅಂದರೆ ಕೇಳಬೇಕಾ. ಡಮಾಲ್ ಡಿಮಿಲ್ ಎಂದು ಸದ್ದು ಮಾಡುತ್ತಲೆ ಇರಬೇಕು.ಮಹಾಕಾಳಿ ಸಿನೆಮಾ ಸಹ ಆ ಪರಂಪರೆಯನ್ನು ಮುದುವರೆಸಿಕೊಂಡು ಬಂದಿದೆ.
ಸಿಂಹಾದ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್ ಕಶ್ಯಪ್ ಅವರು ನಿರ್ಮಿಸುತ್ತಿರುವ ಮಹಾಕಾಳಿ ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ವಿ.ಆರ್.ಎಲ್ ಮೋಟರ್ಸ್, ಕುರುಬರಹಳ್ಳಿ ಅಪಾರ್ಟ್ಮೆಂಟ್ ಹಾಗೂ ಗವಿಪುರಂ ಗುಟ್ಟಹಳ್ಳಿಯಲ್ಲಿ ನಡೆದಿದೆ. ಮಾಲಾಶ್ರೀ, ಶ್ರೀನಿವಾಸಮೂರ್ತಿ, ಜೈಜಗದೀಶ್, ಮೈಕೋ ನಾಗರಾಜ್, ಭಜರಂಗಿ ಲೋಕಿ, ಯು. ನರೇಶ್, ಪ್ರೆಮಲತಾ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಅಭಿನಯಿಸಿದ್ದಾರೆ. ಪಳನಿರಾಜ್ ಸಾಹಸ ನಿರ್ದೇಶನ ಮಾಡಿದ್ದಾರೆ.
ಇದರೊಂದಿಗೆ ಮಹಾಕಾಳಿ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಡುಗಳ ಚಿತ್ರೀಕರಣ ಮೇನಲ್ಲಿ ಆರಂಭವಾಗಲಿದೆ.
ಅಜಯ್ ಕುಮಾರ್ ಅವರು ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರವನ್ನು ಎಸ್.ಮಹೇಂದರ್ ನಿರ್ದೇಶಿಸುತ್ತಿದ್ದಾರೆ. ಸೆಲ್ವಂ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅನಿಲ್ಕುಮಾರ್ ಸಂಭಾಷಣೆ ಬರೆದಿದ್ದಾರೆ.
ಅಪಾರ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಮಾಲಾಶ್ರೀ ಅಭಿನಯಿಸುತ್ತಿದ್ದಾರೆ.
ಶ್ರೀನಿವಾಸಮೂರ್ತಿ, ಎಂ.ಎನ್.ಲಕ್ಷ್ಮೀದೇವಿ, ಪದ್ಮಿನಿಪ್ರಕಾಶ್, ಜೈಜಗದೀಶ್, ಮೈಕೋ ನಾಗರಾಜ್, ಭಜರಂಗಿ ಲೋಕಿ, ಯು.ನರೇಶ್, ಪ್ರೆಮಲತಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Follow us on Google News and stay updated with the latest!
Comments
- logoutLogout
-
Contact at support@indiaglitz.com