ಗೆದ್ದ ಮಗ ಬಿದ್ದ ಮಗ ಶ್ರೀಮುರಲಿ
Send us your feedback to audioarticles@vaarta.com
ನಟ ಶ್ರೀಮುರಲಿ ಕುರ್ಚಿಯಲ್ಲಿ ಕುಳಿತವರು ಬಿದ್ದಿದ್ದಾರೆ. ಯಾತಕ್ಕೆ ಅಂತೀರಾ. ಅವರ ಸಿನೆಮಾ ಉಗ್ರ0 ಬಾಕ್ಸ್ ಆಫೀಸು ರಿಪೋರ್ಟ್ ಕೇಳಿ. ಸೋಮವಾರದ ದಿವಸ ಸಿನೆಮಾ ಗೆಲುವು ಕಂಡರೆ ಅದು ನಿಜವಾದ ಗೆಲುವು. ಕೆಲವು ಕಡೆ 80 ರಷ್ಟು ಹಾಗೂ ಇನ್ನಿತರರ ಕಡೆ 100 ರಷ್ಟು ಚಿತ್ರಮಂದಿರ ಉಗ್ರ0 ಸಿನೆಮಕ್ಕೆ ತುಂಬಿದೆ. ಅಷ್ಟೊಂದು ಸಂತೋಷದಿಂದ ಮನೆಯಲ್ಲಿ ಈ ವರದಿ ಕೇಳಿದ ಶ್ರೀಮುರಲಿ ಸಣ್ಣಗೆ ಬಿದ್ದರಂತೆ. ಪಾಪ. ಅವರು ಬಾಕ್ಸ್ ಆಫೀಸು ಅಲ್ಲಿ ಬಿದ್ದವರು ಈಗ ಎದ್ದು ಬರುತ್ತಿದ್ದಾರೆ. ಸಿನೆಮಾದ ಎಂಟೈರ್ ಕ್ರೆಡಿಟ್ ನಮ್ಮ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಸಲ್ಲಬೇಕು ಅನ್ನುವ ಶ್ರೀಮುರಲಿ ಒಂದು ಗುಟ್ಟನ್ನು ಹೊರಹಾಕಿದರು.
ನನಗೆ ಮಗ ಹುಟ್ಟಿದಾಗ ಅಗಸ್ತ್ಯ ಪಾತ್ರ ನಂದೇ ಸಿನೆಮಾ ಬದಲಿಸಿ ಹುಟ್ಟಿದ್ದು. ಅದು 2007ರಲ್ಲಿ. ಈಗ ಉಗ್ರ0 ಹುಟ್ಟಿದೆ ನನ್ನ ಮಗಳು ಹುಟ್ಟಿದ್ದಾಳೆ ಎಂದು ಸಂತೋಷದಿಂದ ಬೀಗಿದರು ಶ್ರೀಮುರಲಿ. ಹಾಗೆಯೇ ಅಟೆಂಪ್ಟ್ ಮಾಡುತ್ತಾ ಇರ್ತೀರಾ ಅಂದಾಗ ಪಕ್ಕದಲ್ಲೇ ಕುಳಿತ್ತಿದ್ದನೃತ್ಯ ನಿರ್ದೇಶಕ ಜೋಡಿ ಮದನ್ ಹರಿಣಿ ಖ್ಯಾತಿಯ ಹರಿಣಿ ಅವರಿಗೆ ಜೋಕ್ ಅರ್ಥ ಆಯಿತು. ಶ್ರೀಮುರಲಿ ನಂತರ ಆ ರೀತಿಯ ಬೇಡ ಎರಡೇ ಮಕ್ಕಳು ಸಾಕು ಎಂದು ತಲೆ ಆಡಿಸಿದರು.
ನಿನ್ನೆ ಶ್ರೀಮುರಲಿ ಚತುರ್ಭುಜ ಧ್ವನಿ ಸಾಂದ್ರಿಕೆ ಬಿಡುಗಡೆ ಮಾಡಲು ಬಂದಿದ್ದರು, ಅವರ ಮುಖದಲ್ಲಿ ಸಿನೆಮಾ ಗೆದ್ದ ಖುಷಿ. ಬಹಳ ದಿನಗಳ ನಂತರ ಒಂದು ಸಕ್ಸಸ್ ಅವರ ಪಾಲಿಗೆ ಸಂದಾಯವಾಗಿದೆ.
ಶಿವಣ್ಣ ಅವರಿಗೆ ಭಜರಂಗಿ, ಉಪೇಂದ್ರ ಅವರಿಗೆ ಬ್ರಹ್ಮ, ಗಣೇಶ್ ಅವರಿಗೆ ಶ್ರಾವಣಿ ಸುಬ್ರಮಣ್ಯ ಎದ್ದು ಬಂದ ಸಂಧರ್ಭ ಗಲ್ಲಾಪೆಟ್ಟಿಗೆಯಲ್ಲಿ. ಈಗ ಸರದಿ ವಿಜಯ್ ಅವರದು. ಅವರ ಹಿಂದಿನ ಸಿನೆಮಾ ಜಯಮ್ಮನ ಮಗ ನಿರೀಕ್ಷಿತ ಮಟ್ಟ ಮುಟ್ಟಲಿಲ್ಲ. ಈ ಗುರುವಾರ ಅವರ ಶಿವಾಜಿನಗರ ಬಿಡುಗಡೆ ಆಗುತ್ತಿದೆ.
Follow us on Google News and stay updated with the latest!
Comments
- logoutLogout
-
Contact at support@indiaglitz.com