ಫೆಬ್ರವರಿಯಲ್ಲಿ ಕ್ವಾಟ್ಲೆ
Send us your feedback to audioarticles@vaarta.com
ಸ್ಯಾಂಡಲ್ವುಡ್ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಕ್ವಾಟ್ಲೆ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಚಿತ್ರ ಫೆಬ್ರವರಿ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಚಂದ್ರಕಲಾ(ಜೆ.ಸಿ.ಕೆ) ರಚನೆ ಹಾಗೂ ನಿರ್ದೇಶನದ ಈ ಚಿತ್ರ ಪಕ್ಕಾ ೪೨೦ನನ್ಮಗ ಎಂಬ ಅಡಿಬರಹ ಹೊಂದಿದೆ. ಚಂದ್ರಕಲಾ ಈ ಚಿತ್ರದ ನಿರ್ಮಾಪಕರು ಕೂಡ. ಪತ್ರಕರ್ತೆಯಾಗಿದ್ದ ಇವರು ಕೆಲವು ಧಾರಾವಾಹಿಗಳಿಗೆ ಸಹ ನಿರ್ದೆಶನ ಮಾಡಿ ಅನುಭವ ಪಡೆದಿದ್ದಾರೆ.
ಪಾರ್ಥ ಈ ಚಿತ್ರದ ನಾಯಕ. ಯಜ಼್ಞಾಶೆಟ್ಟಿ ಕ್ವಾಟ್ಲೆ ಚಿತ್ರದ ನಾಯಕಿ. ಐದು ಹಾಡುಗಳಿರುವ ಈ ಚಿತ್ರಕ್ಕೆ ಲಿಯೋ ಸಂಗೀತ ನೀಡಿದ್ದಾರೆ. ಚೆಲ್ವು ಛಾಯಾಗ್ರಹಣ, ಈಶ್ವರ್ ಸಂಕಲನ, ಹ್ಯಾರಿಸ್ ಜಾನಿ ಸಾಹಸ ನಿರ್ದೇಶನ, ರೇವಣ್ಣ ಕಲಾ ನಿರ್ದೇಶನ ಹಾಗೂ ಶರೀಫ಼್ ಬಾಂಬೆ, ಮನು ಶಶಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಗೌತಮ್ ಶ್ರೀವತ್ಸ ಈ ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡಿದ್ದಾರೆ.
Follow us on Google News and stay updated with the latest!
Comments
- logoutLogout
-
Contact at support@indiaglitz.com