ಲೊಡ್ಡೆ - ಪುಂಗಿದಾಸ ಕೋಮಲ್ ಕುಮಾರ್
Send us your feedback to audioarticles@vaarta.com
ಕ್ವಿಕ್ಕ್ ಆಗಿ ಸಿನೆಮಾ ಮಾಡು ಕ್ವಿಕ್ಕ್ ಆಗಿ ಹಣ ಮಾಡು ಎಂಬುದು ನಾಯಕ ನಟ ಕೋಮಲ್ ಕುಮಾರ್ ಅವರ ಪಾಲಿಸಿ ಇದ್ದಂತೆ ಕಾಣುತ್ತಿದೆ. ದರ್ಶಿನಿ ಹೋಟೆಲಿನ ದೋಸೆ ರೆಡೀ ಆದಂತೆ ಅವರ ಚಿತ್ರಗಳು ರೆಡೀ ಆಗುತ್ತಿದೆ ಎಂಬುದು ಸ್ವಲ್ಪ ಉತ್ಪ್ರೇಕ್ಷೆ. ಇದೆಕ್ಕೆಲ್ಲ ಕಾರಣ ಅವರ ಮಿಸ್ಟರ್ ಗರಗಸ ಅಂತಲೆ ಹೇಳಬಹುದು. ಕ್ವಿಕ್ಕ್ ಮೇಕಿಂಗ್ ಅರ್ನಿಂಗ್ ತೋರಿಸಿ ಕೊಟ್ಟಿದ್ದೆ ಅದು.
ಸಧ್ಯಕ್ಕೆ ಲೊಡ್ಡೆ ಹಾಗೂ ಪುಂಗಿದಾಸ ಎರಡು ಒಟ್ಟಿಗೆ ಬಿಡುಗಡೆ ಹಂತಕ್ಕೆ ಬರುತ್ತಿದೆ. ಮತ್ತೊಂದು ಕಡೆ ಗೋವ ಸಹ ಸಿದ್ದವಾಗಿದೆ. ಕರಡಿ ಐ ಪಿ ಎಸ್ ನಾನು ಸಹ ಎಂದು ಕೋಮಲ್ ಕುಮಾರ್ ಹೇಳಿಕೊಂಡಿದ್ದರು.
ಸಧ್ಯಕ್ಕೆ ಸೆನ್ಸೆಷನ್ ಸ್ಟಾರ್ ಕೋಮಲ್ ಕುಮಾರ್ ಹಾಗೂ ಆಕಾಂಕ್ಷ ಪುರಿ ಅವರ ಅಭಿನಯದ ಲೊಡ್ಡೆ ಚಿತ್ರೀಕರಣವನ್ನು ತೀರ್ಥಹಳ್ಳಿ ಹಾಗೂ ಬೆಂಗಳೂರಿನಲ್ಲಿ ಮುಗಿಸಿಕೊಂಡಿದೆ. ಮಾತುಗಳ ಭಾಗದ ಚಿತ್ರೀಕರಣದ ನಂತರ ಚಿತ್ರವೂ ಸಂಕಲನದ ಕೆಲಸವನ್ನು ಶುರು ಇಟ್ಟುಕೊಂಡಿದೆ.
ನಿರ್ಮಾಪಕ ಮಂಜುನಾಥ್ ಅವರು ಚಿತ್ರೀಕರಣ ವ್ಯವಸ್ಥಿತ ರೀತಿಯಲ್ಲಿ ಜರಗುತ್ತಿರುವುದಕ್ಕೆ ಸಂತೋಷದಿಂದ ಇದ್ದಾರೆ. ಲೊಡ್ಡೆ ಚಿತ್ರದಲ್ಲಿ ಶಯ್ಯಾಜಿ ಶಿಂದೆ ಗೋಪಿನಾಥ್ ಭಟ್ (ಬಾಬ್ಜಿ) ಹಾಗೂ ಇತರರು ಪಾತ್ರವರ್ಗದಲ್ಲಿ ಇರುವ ಚಿತ್ರ.
ತಿರುಮಲಾ ಡೆವಲಪರ್ಸ್ ಅರ್ಪಿಸುವ ಉಲ್ಲಾಸ್ ಸಿನೆಮಾದ ಪ್ರಥಮ ಕಾಣಿಕೆ ಲೊಡ್ಡೆ ಕಥೆ ಹಾಗೂ ಸಂಭಾಷಣೆ ಎಂ ಎಸ್ ಶ್ರೀನಾಥ್ ಅವರದು. ಇವರು ರಾಂಬೋ ಹಾಗೂ ವಿಕ್ಟರಿ ಚಿತ್ರಗಳಿಗೆ ನಿರ್ದೇಶನ ಹಾಗೂ ಕಥೆ ಒದಗಿಸಿರುವವರು.
ಚಿತ್ರಕಥೆ ಹಾಗೂ ನಿರ್ದೇಶನವನ್ನು ಎಸ್ ವಿ ಸುರೇಶ್ ಅವರು ಮಾಡುತ್ತಿದ್ದಾರೆ.
Follow us on Google News and stay updated with the latest!
Comments
- logoutLogout
-
Contact at support@indiaglitz.com