ಶಾರ್ಕ್ ಮೊದಲ ಬಾರಿಗೆ
Send us your feedback to audioarticles@vaarta.com
ಕನ್ನಡ ಸಿನಿಮಾದಲ್ಲಿ ಶಾರ್ಕ್ ಏನು ಮಾಡಲು ಬಂದಿದೆ. ಅದನ್ನು ನೀವು ಸಿನಿಮಾದಲ್ಲಿ ನೋಡಬೇಕು. ಕಂಪ್ಯೂಟರ್ ತಂತ್ರ ಬಳಸಿ ಕೋಟಿಗೊಂದು ಲವ್ ಸ್ಟೋರಿ ಸಿನಿಮಾದಲ್ಲಿ ನಿರ್ದೇಶಕ ಜಗ್ಗು ಸಿರ್ಸಿ ಬಳಸಿದ್ದಾರೆ. ಅದಕ್ಕೆ ನಿರ್ಮಾಪಕ ಎಚ್ ಎಲ್ ಎನ್ ರಾಜ್ ನಿರ್ಮಾಪಕರ ಪ್ರೋತ್ಸಾಹ ಇದೆ. ಇಂಗ್ಲೀಷ್ ಸಿನಿಮಾಗಳಿಗೆ ಗ್ರಾಫಿಕ್ಸ್ ಮಾಡುವ ತಂಡ ಅಪಾರ ವೆಚ್ಚದಲ್ಲಿ ಶಾರ್ಕ್ ಚಮತ್ಕಾರವನ್ನು ಮಾಡಿದೆ.
ನಮ್ಮದು ಒಂದು ಕೋಟಿ ಅಲ್ಲ 100 ಕೋಟಿಯಲ್ಲಿ ಒಂದು ಲವ್ ಸ್ಟೋರಿ ಎಂದು ಹೇಳುವ ನಿರ್ದೇಶಕರು ಈಗಾಗಲೇ ಸಿನಿಮಾವನ್ನು ಬಿಡುಗಡೆ ಮಾಡಿಬಿಡಬೇಕಿತ್ತು. ಆದರೆ ಬಿಡುಗಡೆಗೆ ಚಿತ್ರಮಂದಿರಗಳ ಸಮಸ್ಯೆ ಹಾಗೂ ಸಿನಿಮಾಕ್ಕೆ ಅಲ್ಲಲ್ಲಿ ನಟಿ ಶುಭ ಪೂಂಜಾ ಮಾತನಾಡುವುದನ್ನು ಬಿಟ್ಟರೆ ಇನ್ನ ಯಾವ ರೀತಿಯ ಪ್ರಚಾರ ಆಗಿಲ್ಲ. ಇದನ್ನು ಗಮನಿಸಿಯೇ ಚಿತ್ರದ ಹಾಟ್ ಹಾಟ್ ಸ್ಥಿರ ಚಿತ್ರಗಳನ್ನು ನಿರ್ಮಾಪಕರೆ ಪತ್ರಿಕಾ ಕಚೇರಿಗಳಿಗೆ ಕಳಸಿರುವುದು.
ಶುಭ ಪೂಂಜಾ ಮಾತ್ರ ಇಂತಹ ಲವ್ ಸ್ಟೋರಿ ಸಿನಿಮಾಗಳನ್ನು ನಾನು ಕೇಳಿಯೇ ಇಲ್ಲ ಅಂತಾರೆ. ಸಯೋಕ್ಕೆ ಹೋರಾಟ ಹುಡುಗ ಹಾಗೂ ಹುಡುಗಿ ಸ್ನೇಹಿತರಾಗಿ,ಪ್ರೇಮಿಗಳಾಗಿ ಕನ್ವರ್ಟ್ ಆಗ್ತಾರೆ. ಮುಂದೆ ಇನ್ನಷ್ಟು ತಿರುವುಗಳನ್ನು ಅನುಭವಿಸುತ್ತಾರೆ.
ಮೊದಲ ಬಾರಿಗೆ ಶುಭ ಪೂಂಜಾ ಅವರಾ ಭಾವ ಬಂಗಿಗಳನ್ನು ಪಡ್ಡೆ ಹುಡುಗರು ನೋಡಿ ಖುಷಿ ಪಟ್ಟಿದ್ದಾರೆ. ಏಳು ಹಾಡುಗಳ ಲೋಕಾರ್ಪಣೆ ಇನ್ನೂ ಆಗಿಲ್ಲ. ರಾಕೇಶ್ ಅಡಿಗ ಜೊತೆ ಶುಭ ಪೂಂಜಾ ಅಷ್ಟೇ ಅಲ್ಲ ಎಲಿಜಿಬತ್ ಟೂಲ್ಲಿ ಸಹ ಅಭಿನಯಿಸಿದ್ದಾರೆ. ಬಿರಾದರ್,ಸಿಂಧು ರಾವ್,ಪ್ರಶಾಂತ್,ವಿಕಾಸ್ ಚೋಪ್ರ ಸಹ ಅಭಿನಯಿಸಿದ್ದಾರೆ.
ಕೀರ್ತಿ ಜೈನ್ ಅವರ ಸಂಗೀತ,ಶಂಕರ್ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಒದಗಿಸಿದ್ದಾರೆ.
Follow us on Google News and stay updated with the latest!
Comments
- logoutLogout
-
Contact at support@indiaglitz.com